ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ಮಾರುತಿನಗರ ಚಿಕ್ಕಜಾಜೂರು ಗ್ರಾಮದ ನಿವಾಸಿ ಸಾದೀಕ್ ಬಾನು ತಂದೆ ಲೇಟ್ ಮಕ್ಬೂಲ್ ಸಾಬ್ (18) ಕಾಣೆಯಾದ ಕುರಿತು ಅಕ್ಟೋಬರ್ 16 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾದೀಕ್ ಬಾನು ಬಟ್ಟೆ ಅಂಗಡಿ ಕೆಲಸ ಮಾಡುತ್ತಿದ್ದು, ಸುಮಾರು 4.5 ಅಡಿ ಎತ್ತರ, ಕೋಲುಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದು, ಎಡ ಮತ್ತು ಬಲ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ, ಕನ್ನಡ, ಹಿಂದಿ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ.
ಕಾಣೆಯಾದವರ ಗುರುತು ಪತ್ತೆಯಾದವರು ಚಿಕ್ಕಜಾಜೂರು ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 9480803150, ಪೋಲಿಸ್ ಉಪಾಧೀಕ್ಷಕರ ದೂರಾವಾಣಿ ಸಂಖ್ಯೆ 08194-222430, 9480803120, ಜಿಲ್ಲಾ ಪೋಲಿಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

