ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಇವು ಎಂದು ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.
ಅಲ್ಪಾವಧಿಯಲ್ಲೇ ಅವರು ಮಾಡಿರುವ ಜನಪರ ಯೋಜನೆಗಳು ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳಾಗಿ ಮೆಚ್ಚುಗೆ ಪಡೆದಿವೆ.
ಆದರೆ ನೀವು ಕನಕಪುರದಲ್ಲಿ ಕಲ್ಲು ಬಂಡೆಗಳನ್ನು ಕರಗಿಸಿ, ನಿಮ್ಮ ಕುಟುಂಬದವರ ಹೆಸರಲ್ಲಿ ಅಕ್ರಮವಾಗಿ ಸಾವಿರಾರು ಕೋಟಿಗೆ ಆಸ್ತಿಯನ್ನು ರಾಕೆಟ್ ವೇಗದಲ್ಲಿ ಏರಿಕೆ ಮಾಡಿಕೊಂಡಿರುವುದೇ ಇದುವರೆಗಿನ ನಿಮ್ಮ ಸಾಧನೆ ಎಂದು ಡಿಕೆ ಶಿವಕುಮಾರ್ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮಂತ್ರಿಯಾದಾಗ ನಿಮ್ಮ ಆಸ್ತಿ ಎಷ್ಟಿತ್ತು? ಈಗ ಸಾವಿರಾರು ಕೋಟಿ ಜಾಸ್ತಿಯಾಗಿದೆ. ಅದರ ಬಗ್ಗೆ ಬಹಿರಂಗಪಡಿಸಿ?
ಮೈಕ್ ಮುಂದೆ ಶೋ ಆಫ್ ಭಾಷಣಗಳನ್ನು ಬಿಟ್ಟು ರಾಜ್ಯಕ್ಕೆ ಮತ್ತು ಜನರಿಗೆ ನಿಮ್ಮ ಕೊಡುಗೆ ಏನು ಜನತೆಗೆ ತಿಳಿಸಿ ಡಿಕೆಶಿ ? ಎಂದು ಜೆಡಿಎಸ್ ಸವಾಲ್ ಹಾಕಿದೆ.
“ಅಂಗೈ ಹುಣ್ಣಿಗೆ ಕನ್ನಡಿ ಬೇಕೇ”-ಬೆಂಗಳೂರು ಉಸ್ತುವಾರಿಗಳೇ, ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ತೇಪೆಯನ್ನಾದರೂ ಸರಿಯಾಗಿ ಹಾಕಿಸಿ. ಬಿಟ್ಟಿ ಬಿಲ್ಡಪ್ ಬಿಡಿ. ಕಲೆಕ್ಷನ್, ಪರ್ಸಂಟೇಜ್ ಗಿರಾಕಿ ಬಗ್ಗೆ ಪ್ರತಿ ದಿನ ಕೆಪಿಸಿಸಿ ಕಚೇರಿಯಲ್ಲೇ ಚರ್ಚೆ ನಡೆಯುತ್ತೆ. ಪರ್ಸಂಟೇಜ್ ಕಾಮಗಾರಿ ಮಿನಿಸ್ಟರ್ ! ಎಂದು ಜೆಡಿಎಸ್ ಡಿಸಿಎಂ ವಿರುದ್ಧ ವಾಗ್ದಾಳಿ ಮಾಡಿದೆ.