ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿರವರಿಗೆ ಝೀ ಕನ್ನಡ ನ್ಯೂಸ್ ಯುವರತ್ನ ಅವಾರ್ಡ್ ನೀಡಿ ಗೌರವಿಸಿದೆ.
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಕೊಡ ಮಾಡುವ ಝೀ ಕನ್ನಡ ನ್ಯೂಸ್ ಯುವ ರತ್ನ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ರವರಿಂದ ಸ್ವೀಕರಿಸಿರುವ
ಮಾಲತೇಶ್ ಮುದ್ದಜ್ಜಿಗೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ನಿಕಟಪೂರ್ವ ರಾಜ್ಯ ಗೌರವಾಧ್ಯಕ್ಷ ವಿ.ಪಾಂಡುರಂಗಪ್ಪ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಪಿ.ಸಂಪತ್‌ಕುಮಾರ್ ಇವರುಗಳು ಅಭಿನಂದಿಸಿದ್ದಾರೆ. ನಟಿ ಸುಧಾರಾಣಿ ಇದ್ದಾರೆ.