7 ಕೋಟಿ ಮೌಲ್ಯದ 210 ಟನ್ ಅಕ್ರಮ ಅಡಿಕೆ ವಶ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಡಿಕೆಯನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
7 ಕೋಟಿ ಮೌಲ್ಯದ 210 ಟನ್‌ಅಡಿಕೆಯನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.

ಶಿವಮೊಗ್ಗದಿಂದ ಹೊಸಪೇಟೆ ಕಡೆಗೆ ಅಡಿಕೆ ಹೊತ್ತ 7 ಲಾರಿಗಳು ಸಾಗುತ್ತಿದ್ದವು. ಚಿತ್ರದುರ್ಗ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಎಸ್‌ಟಿ ಅಧಿಕಾರಿ ಹಮೀದ್‌ಸಿದ್ಧಿಕಿ ನೇತೃತ್ವದ ತಂಡ ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿತು. ಜಿಎಸ್‌ಟಿ ಪಾವತಿ ಸಂಬಂಧ ಸಮರ್ಪಕವಾದ ದಾಖಲೆ ಸಲ್ಲಿಸದ ಕಾರಣ 7 ಲಾರಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿ 210 ಟನ್ ಅಡಿಕೆ ಇರುವುದು ತಿಳಿದು ಬಂದಿದೆ.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಲಾರಿಗಳನ್ನು ನಿಲ್ಲಿಸಲಾಗಿದೆ. ಜಿಎಸ್‌ಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 

 

 

Share This Article
error: Content is protected !!
";