ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 28 ಕೊಲೆ ಆರೋಪ!?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 28 ಕೊಲೆ ಆರೋಪ ಸುದ್ದಿ ವಿಧಾನಸಭೆಯಲ್ಲಿ ಸೋಮವಾರ ಭಾರಿ ಸದ್ದು ಮಾಡಿತಲ್ಲದೆ ವಿಪಕ್ಷಗಳು ಎಸ್ಐಟಿ ರಚಿಸುವಂತೆ ಆಗ್ರಹ ಮಾಡಿದವು.

ಮುಖ್ಯಮಂತ್ರಿ 28 ಕೊಲೆ ಮಾಡಿದ್ದಾರೆ ಎಂಬ ಆರೋಪವನ್ನು ಧರ್ಮಸ್ಥಳದಲ್ಲಿ ಮೃತ ಬಾಲಕಿಯ ಪರ ಹೋರಾಟಗಾರರೊಬ್ಬರು ಮಾಡಿದ್ದಾರೆ. ಇದರ ತನಿಖೆಗೆ ಎಸ್​ಐಟಿ ರಚಿಸಬೇಕು ಎಂದು ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಒತ್ತಾಯಿಸಿದರು.

- Advertisement - 

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೊಲೆ ಆರೋಪ ಮಾಡಿದ್ದಾನೆ. ಇದು ಅತ್ಯಂತ ಗಂಭೀರ ಆರೋಪ. ಸರ್ಕಾರ ಸುಮ್ಮನೆ ಕುಳಿತಿರುವುದು ನೋಡಿದರೆ ಕಣ್ಣು, ಕಿವಿ ಇಲ್ಲದಂತೆ ಕಾಣುತ್ತದೆ. ಈ ಬಗ್ಗೆ ತನಿಖೆ ನಡೆಸುತ್ತೀರಾ ಅಥವಾ ಮತ್ತೆ ಎಸ್​ಐಟಿ ರಚಿಸುತ್ತೀರಾ? ಎಂದು ಖಾರವಾಗಿ ಅಶೋಕ್ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಇಷ್ಟೊಂದು ಗಂಭೀರ ಆರೋಪ ಕೇಳಿ ಬಂದಿದ್ದರೂ ಸರ್ಕಾರ ಮೌನವಾಗಿದೆ. ಇದಕ್ಕೆ ಉತ್ತರ ಕೊಡುತ್ತಿಲ್ಲ ಎಂದು ಹೇಳಿದರು.

- Advertisement - 

ಶಾಸಕ ಸುರೇಶ್ ಕುಮಾರ್ ಮಾತನಾಡಿ, ಸಿಎಂ ವಿರುದ್ಧ ಆ ವ್ಯಕ್ತಿ ಧೈರ್ಯವಾಗಿ ಆರೋಪ ಮಾಡಿದ್ದಾನೆ, ಸರ್ಕಾರ ಇದನ್ನು ಹೇಗೆ ಸಹಿಸಿಕೊಳ್ಳುತ್ತದೆ? ಸರ್ಕಾರ ಯಾಕೆ ಸುಮ್ಮನಿದೆ? ಎಂದು ಪ್ರಶ್ನಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗಂಭೀರತೆ ಅರಿತು ಪ್ರತಿಕ್ರಿಯಿಸಿ, ಸರ್ಕಾರ ಸಮ್ಮನೆ ಕುಳಿತಿಲ್ಲ. ಸರ್ಕಾರ ಅಷ್ಟೊಂದು ಅಸಹಾಯಕ ಆಗಿದೆ ಅನ್ಕೊಂಡಿದ್ದೀರಾ? ಅಂತ ತಿರುಗೇಟು ನೀಡಿದರು.

ಸುನೀಲ್‌ಕುಮಾರ್‌ಮಾತನಾಡಿ, ದೇಶದ ನಂ.1 ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಅಂತ ಕಾಲೆಳೆದರು. ಬಳಿಕ ಮಾತು ಮುಂದುವರಿಸಿದ ಪರಮೇಶ್ವರ್, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಸದನಕ್ಕೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಆ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ವಿರುದ್ಧ ಆರೋಪ ಮಾಡಿರುವ ವಿಡಿಯೋ ನೋಡಿದ್ದೇನೆ, ಕೇಳಿದ್ದೇನೆ. ಸಿಎಂ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎನ್ನುವ ನಂಬರಿನ ವಿವರ ನನ್ನ ಮೊಬೈಲ್​ನಲ್ಲಿ ಇದೆ. ಆ ವ್ಯಕ್ತಿ ಕೇವಲ ಸಿಎಂ ಬಗ್ಗೆ ಹೇಳಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಆರೋಪ ಮಾಡಿದ್ದಾನೆ. ಆದರೆ, ಸದನದಲ್ಲಿ ಅಂತವರ ಹೆಸರು ಪ್ರಸ್ತಾಪಿಸಿ ನಾಯಕನಂತೆ ವಿಜೃಂಭಿಸಬೇಡಿ ಎಂದು ತಿಳಿಸಿದರು.

ಶಾಸಕ ಶಿವಲಿಂಗೇಗೌಡ ಅವರು ಕೆಲ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ಈ ಹೇಳಿಕೆ ಗಮನಿಸಿರಲಿಲ್ಲ. ಬಳಿಕ ವಿಷಯ ಅವರಿಗೆ ತೋರಿಸಿ ತಿಳಿಸಲಾಯಿತು. ನಂತರ ಗೃಹ ಸಚಿವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

 

Share This Article
error: Content is protected !!
";