ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಹುಳಿಯಾರು ರಸ್ತೆಯ ಒಕ್ಕಲಿಗರ ಭವನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಭೂಮಿ ಪೂಜೆ ನೆರವೇರಿಸಿದರು.
ಹಿರಿಯೂರಿನಲ್ಲಿ ನಿರ್ಮಾಣವಾಗುತ್ತಿರುವ ಒಕ್ಕಲಿಗರ ಭವನಕ್ಕೆ 50 ಲಕ್ಷ ರೂ. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ .ಜಯಣ್ಣ ಮಾತನಾಡಿ ತಾಲೂಕು ಒಕ್ಕಲಿಗರ ಸಂಘಕ್ಕೆ ಅಪೂರ್ಣಗೊಂಡಿರುವ ಕಾಮಗಾರಿಯನ್ನು ಮುಂದುವರೆಸಲು ಒಂದು ಕೋಟಿ ಮಂಜೂರು ಮಾಡಿದ್ದು ಅದರಲ್ಲಿ ಮೊದಲನೇ ಕಂತಾಗಿ 50 ಲಕ್ಷದ 50,000 ರೂಪಾಯಿಗಳನ್ನು ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಮಂಜೂರು ಮಾಡಿರುವುದಕ್ಕೆ ಸಮಾಜದ ವತಿಯಿಂದ ಸಚಿವ ಸುಧಾಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಉಡುವಳ್ಳಿ ಕೆರೆಗೆ ನೀರು ಹರಿಸಲು ಸಚಿವರಲ್ಲಿ ಮನವಿ ಮಾಡಿಕೊಂಡರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಬಿಬಿಎಂಪಿ ಉಪ ಆಯುಕ್ತ ಜೆ. ರಾಜು ಬೇತೂರು ಪಾಳ್ಯ ಮಾತನಾಡಿ ತಾಲೂಕು ಒಕ್ಕಲಿಗರ ಸಂಘಕ್ಕೆ ಅನುದಾನ ನೀಡಿದ್ದು ಸಮಾಜದ ಬಗ್ಗೆ ಅಪಾರ ಗೌರವ ಪ್ರೀತಿ ಹೊಂದಿರುವ ಸಚಿವರಿಗೆ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ನಗರಸಭಾ ಸದಸ್ಯ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡರು ಮಾತನಾಡಿ ಸಚಿವರಲ್ಲಿ ಮನವಿ ಮಾಡುತ್ತಾ ತಾಲೂಕು ಒಕ್ಕಲಿಗರ ಸಂಘಕ್ಕೆ ಕಲ್ಯಾಣ ಮಂಟಪ ನಿರ್ಮಿಸಲು ಐದು ಕೋಟಿ ಮಂಜೂರು ಮಾಡಲು ಮನವಿ ಸಲ್ಲಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ರಾಮಚಂದ್ರಪ್ಪ ಮಾತನಾಡಿ ಸಚಿವರು ನಮ್ಮ ಸಮಾಜದ ಬಗ್ಗೆ ಇಟ್ಟಿರುವ ಪ್ರೀತಿ ಗೌರವಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿ ನಮ್ಮ ಸಂಘದ ಆಸ್ತಿ ಎರಡು ಎಕರೆ ಎಂಟು ಗುಂಟೆ ಇದ್ದು ಇದರಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ಕನಿಷ್ಠ 5 ಕೋಟಿ ಸರ್ಕಾರದಿಂದ ಮಂಜೂರು ಮಾಡಿಸಿ ಕೊಡಲು ಮನವಿ ಮಾಡಿದರು .
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ನಮ್ಮ ಜೀವನ ಶಾಶ್ವತವಲ್ಲ ,ನಾವು ಮಾಡುವ ಕೆಲಸ ಶಾಶ್ವತ ನಾನು ಎಲ್ಲಾ ಸಮಾಜವನ್ನು ಗೌರವಿಸುತ್ತೇನೆ. ಯಾರನ್ನು ದ್ವೇಷಿಸುವ ಗುಣ ನಮ್ಮಲ್ಲಿಲ್ಲ. ತಾಲೂಕು ಒಕ್ಕಲಿಗರ ಸಂಘದ ಮನವಿಯಂತೆ ನೀವು ನಿರ್ಮಿಸುವ ಕಲ್ಯಾಣ ಮಂಟಪಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗುಂಡೇಶ್, ವಿಠಲ್, ಸಣ್ಣಪ್ಪ, ಕಾರ್ಯದರ್ಶಿ ಜಿ ಏಕಾಂತಪ್ಪ, ಕಾರ್ಯಾಧ್ಯಕ್ಷ ಜಯಕುಮಾರ್, ಉಪಾಧ್ಯಕ್ಷ ಜಲ್ದಣ್ಣ, ಖಜಾಂಚಿ ನಾರಾಯಣ್, ಸುರೇಶ್ ಬಾಬು, ಸಮಾಜದ ಹಿರಿಯರಾದ ಕೆ ಟಿ ರುದ್ರಮುನಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಸಿ .ಹೂರಕೆರಪ್ಪ ಎಸ್ .ಜೆ. ಹನುಮಂತರಾಯ, ಪಿಟ್ಲಾಲಿ ಸುಂದರೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ ಖಾದಿ ರಮೇಶ, ಮಹಿಳಾ ಘಟಕದ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು, ಕೆಂಪೇಗೌಡ ಯುವಕ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಸಮಾಜದ ಮುಖಂಡರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.