Ad imageAd image

ನಟ ದರ್ಶನ್‌ ಮತ್ತು ಪವಿತ್ರಾ ಗೌಡರ ಜಾಮೀನು ಭವಿಷ್ಯ ಅ.14 ಫಿಕ್ಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟ ದರ್ಶನ್‌ಮತ್ತು ಪವಿತ್ರಾ ಗೌಡ
ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಅಕ್ಟೋಬರ್ 14ಕ್ಕೆ ಮುಂದೂಡಿ ಆದೇಶ ಮಾಡಿತು.

ಜಾಮೀನು ಅರ್ಜಿಯ ಸುದಿರ್ಘ ವಿಚಾರಣೆ ಮುಗಿದಿದ್ದು, ಸೆಷನ್ಸ್‌ಕೋರ್ಟ್ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದೆ.

ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಅವರ ವಾದಕ್ಕೆ ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರತಿ ವಾದ ಮಾಡಿದರು.

ತನಿಖಾಧಿಕಾರಿಯ ವರದಿಯೇ ಸರಿಯಿಲ್ಲ. ತನಿಖಾಧಿಕಾರಿಯನ್ನು ಎಸ್‌ಪಿಪಿ ತಪ್ಪುದಾರಿಗೆ ಎಳೆದಿದ್ದಾರೆ. ಇದೇನಾ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ ಎಂದು ಸಿವಿ ನಾಗೇಶ್ ವಾದ ಮಾಡಿದರು. ಇದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿ ಸಿಡಿಆರ್ ಸುಮಾರು 10 ಸಾವಿರ ಪುಟ ಇದೆ ಎಂದು ಉಲ್ಲೇಖಿಸಿದರು.

ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿಸಿಲ್ಲ, ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧ ಮಾಡಲಾಗಿದೆ.

ದರ್ಶನ್ ಸಿಮ್ ಹೇಮಂತ್‌ಗೆ ಸೇರಿದ್ದು ಅಂತ ಸಿವಿ ನಾಗೇಶ್ ಹೇಳಿದರು. ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈಲೈಫ್ ಸುಬ್ಬಿ ಇಂತಹ ಮೆಸೇಜ್‌ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ? ಎಂದು ಪ್ರಶ್ನಿಸಲಾಯಿತು.

 

 

- Advertisement -  - Advertisement - 
Share This Article
error: Content is protected !!
";