ಡಿಸಿಸಿ ಬ್ಯಾಂಕಿಗೆ ಶಾಸಕ ಟಿ.ರಘುಮೂರ್ತಿ ಪಾದಾರ್ಪಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿ ಅಧಿಕಾರೇತರ ಸದಸ್ಯರನ್ನಾಗಿ ದಿನಾಂಕ-25-11-25ರಂದು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ರಂಗನಾಥ್ ಅವರು ಆದೇಶ ಮಾಡಿದ್ದಾರೆ.

ಇದೇ ವೇಳೆ ಚಳ್ಳಕೆರೆ ಸಿ.ವೀರಭದ್ರಬಾಬು ಅವರ ನಾಮ ನಿರ್ದೇಶನ ಆದೇಶವನ್ನು ರದ್ದು ಮಾಡಲಾಗಿದೆ. ಹಾಗಾಗಿ ಶಾಸಕ ರಘುಮೂರ್ತಿ ಅವರು ಡಿಸಿಸಿ ಬ್ಯಾಂಕಿಗೆ ಪಾದಾರ್ಪಣೆ ಮಾಡಲಿದ್ದಾರೆ.

- Advertisement - 

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್ ಅವರಿಗೂ ಶಾಸಕ ಟಿ.ರಘುಮೂರ್ತಿ ಅವರಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಮನಸ್ತಾಪ ಉಂಟಾಗಿತ್ತು.

ಸರ್ಕಾರ ಮಾಡಿರುವ ಈ ಆದೇಶದಿಂದ ಇಬ್ಬರೂ ಒಂದಾಗಿ ಆಡಳಿತ ಮಾಡುತ್ತಾರೋ ಅಥವಾ ಮುಸುಕಿನ ಗುದ್ದಾಟ ಮುಂದುವರೆಯುತ್ತೋ ಕಾದು ನೋಡಬೇಕಾಗಿದೆ.

- Advertisement - 

Share This Article
error: Content is protected !!
";