ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಜೆಡಿಎಸ್ ಪಕ್ಷದ ವಿಧಾನ ಪರಿಷತ್‌ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ ಅವರು, ಸೋಮವಾರ ವಿಧಾನ ಪರಿಷತ್‌ಕಲಾಪದಲ್ಲಿ ಸರ್ಕಾರ ಏಕಾಏಕಿ ಬಿಪಿಎಲ್‌ಕಾರ್ಡ್‌ಸ್ಥಗಿತಗೊಳಿಸಿರುವ ಹಾಗೂ ಪಡಿತರ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದರು.
ರಾಜ್ಯ ಸರ್ಕಾರದ ಅವೈಜ್ಞಾನಿಕ ಪರಿಷ್ಕರಣೆಯಿಂದ ಅರ್ಹ ಬಿಪಿಎಲ್‌ಕಾರ್ಡ್‌ಪಡಿತರದಾರರೂ ಸಹ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.