ಬೊಂಬಾಟ್ ಬೇಸಿಗೆ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೊಂಬಾಟ್ ಬೇಸಿಗೆ
ವೆಸ್ಟ್
ಮಾಡದಿರಿ
ಬೇಸಿಗೆಯ ಬಿರು ಬಿಸಿಲನು

- Advertisement - 

 ಜೀವಿಗಳಿಗೆ
ಪ್ರಕೃತಿ ನೀಡಿರುವ
ವರದಾನವಿದು
ವೇಸ್ಟ್ ಮಾಡದಿರಿ
ಬೇಸಿಗೆಯ ಬಿಸಿಲನು

- Advertisement - 

 ಚಳಿಗಾಲ , ಮಳೆಗಾಲದಲಿ
ಬರುವ ಸಕಲ ಜೀವರಾಶಿಗಳ ಮೇಲಿನ
ವೈಪರಿತ್ಯಗಳ ಸರಿ ದೂಗಿಸಿ
ಹೊಸ ಚೈತನ್ಯ ನೀಡುವ
ಬೇಸಿಗೆಯ ಬಿಸಿಲ
 ವೇಸ್ಟ್  ಮಾಡದಿರಿ

 ಪೂರ್ವಿಕರು
ಬಳಸುವ ಆಚರಣೆಗಳ
ತನ್ನಿ ಅನುಷ್ಟಾನಕೆ
ಅಭ್ಯಂಜನ
,ಸೇವಿಸಿರಿ

- Advertisement - 

ನೈಸರ್ಗಿಕ ಪಾನಿಯ,
ಬೇಸಿಗೆ ಹಣ್ಣುಗಳಾದ
ಬೇಲದ ಹಣ್ಣು
,
ಬಾರೆ ಕಾಯಿ
, ಕರಂಬೋಲ
ಕಲ್ಲಂಗಡಿ. ಇನ್ನೂ ಅನೇಕ
ವೇಸ್ಟ್  ಮಾಡದಿರಿ ಬೇಸಿಗೆಯ ಬಿಸಿಲಿನು

 ಅಮ್ಮ ಅಜ್ಜಿಯರು
ಮಾಡಿಡುತ್ತಿದ್ದ
ಹಪ್ಪಳ
, ಸಂಡಿಗೆ, ಶಾವಿಗೆಯನು
ಮಳೆಗಾಲಕ್ಕೆ ಸವಿಯಲು ಸಜ್ಜಾಗಿ

ಕೊಂಡರಾಯಿತು ಎನ್ನುವ
ಗೋಜಿಗೆ ಹೋಗಿ
ವೆಸ್ಟ್ ಮಾಡದಿರಿ
ಬೇಸಿಗೆಯ ಬಿಸಿಲನು

ಮಕ್ಕಳೊಂದಿಗೆ ಬೇಸಿಗೆರಜಾದ ಮಜಾ
ತವರು ಮನೆಯ ತರಾವರಿ
ನೆನಪುಗಳ ಸಂಬ್ರಮದಲಿ
ಮಿಂದು
, ಮೋಜಾಯಿಸಿ

ಬಂಧುಗಳೊಡನೆ,
ಹಳೆಯ ಆಲ್ಬಂ ಒಮ್ಮೆ ತಿರುವಿ ಹಾಕಿ
,
ಹೋಳಿ ಆಡಿದ ರಂಗು ನೆನಪು ಮಾಡಿಕೊಳ್ಳಿ
,
ಆದರೆ
ವೆಸ್ಟ್ ಮಾಡದಿರಿ
ಬೇಸಿಗೆಯ ಬಿಸಿಲನು

 

ಹಾಗೇ ಕಣ್ಣಾಡಿಸಿ
ಮನೆಯ ರಗ್ಗು
ರಜಾಯಿ ದಿಂಬಾಸಿಗೆಯ
ಮುಗ್ಗಾಗದಂತೆ ತೊಳೆದೊಣಗಿಸಿ

ರಣ ಬಿಸಿಲಿಗೆ
ಮರೆಯದಿರಿ ಮಾವಿನ

ಉಪ್ಪಿನಕಾಯಿ ಹಾಕುವುದ
ಹೊರಟರೆ ಹೊರಗೆ ಛತ್ರಿಯ ಮರೀಬೇಡಿಆದರೂ

ವೆeಸ್ಟ್ ಮಾಡದಿರಿ
ಬೇಸಿಗೆಯ ಬಿಸಿಲಿನ 

ಬೇಸಿಗೆಯ ಕವನ ಹಿಡಿದಿದ್ದರೆ ಒಂದು ಲೈಕ್
ಕವಿತೆ-ಗುಜ್ಜರ್ ದಾವಣಗೆರೆ

 

 

Share This Article
error: Content is protected !!
";