ಬೆಂಗಳೂರು ನಗರದ ಜಿಲ್ಲಾಧ್ಯಕ್ಷರಾಗಿ ನಾಗೇಂದ್ರ ಶಿವಮೊಗ್ಗ ಆಯ್ಕೆ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಎಲ್ಲಾ ವೃತ್ತಿಪರ ಸಮಾಜಕಾರ್ಯಕರ್ತರ
, ಬಿ ಎಸ್ ಡಬ್ಲ್ಯೂ ಸಮಾಜಕಾರ್ಯ ಪದವಿ, ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಸಮಾಜಕಾರ್ಯ ಪದವೀಧರರನ್ನು, ವಿದ್ಯಾರ್ಥಿಗಳನ್ನು, ನೌಕರರನ್ನು ಸಂಘಟಿಸಿ ಸಮಾಜಕಾರ್ಯ ವೃತ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ

ಸಮಾಜಕಾರ್ಯ ವೃತ್ತಿಯನ್ನು ಉಳಿಸಿ ಬೆಳೆಸಲು ಕರ್ನಾಟಕ ಸ್ಟೇಟ್ ಪ್ರೊಫೆಷನಲ್ ಸೋಶಿಯಲ್ ವರ್ಕರ್ಸ್ ವೆಲ್ ಫೇರ್ ಅಸೋಸಿಯೇಷನ್ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಈ ಸಂಘಟನೆಯ ರಾಜ್ಯ ಸಮಿತಿಯು ನಾಗೇಂದ್ರ ಶಿವಮೊಗ್ಗರವರನ್ನು ಬೆಂಗಳೂರು ನಗರದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

- Advertisement - 

ಆಯ್ಕೆಯಾದ ನಾಗೇಂದ್ರ ಶಿವಮೊಗ್ಗರವರಿಗೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಸಂತೋಷ್ ಕುಮಾರ್ ರವರು ಸೇರಿದಂತೆ ಸಂಘಟನೆಯ ಎಲ್ಲಾ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

 

- Advertisement - 

 

Share This Article
error: Content is protected !!
";