ಬಡವರನ್ನೇ ನಿರ್ಮೂಲನೆ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡತನ ನಿರ್ಮೂಲನೆ ಮಾಡುವ ಬದಲು
, ಬಡವರನ್ನೇ ನಿರ್ಮೂಲನೆ ಮಾಡಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಜೆಡಿಎಸ್ ತಿಳಿಸಿದೆ. ಭ್ರಷ್ಟ  ಕಾಂಗ್ರೆಸ್‌ ಸರ್ಕಾರದ ವಕ್ರದೃಷ್ಟಿ ಈಗ ಅಶಕ್ತ ನಾಗರಿಕರ ಪಿಂಚಣಿ ಹಣದ ಮೇಲೆ ಬಿದ್ದಿದೆ.

ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಬರಿದುಮಾಡಿರುವ ಸಿದ್ದರಾಮಯ್ಯ ಸರ್ಕಾರ, ಮಾಸಿಕ ಪಿಂಚಣಿ ಪಡೆಯುತ್ತಿರುವವರ ಪೈಕಿ 23.19 ಲಕ್ಷ ಅನರ್ಹರನ್ನು ಮಾಡಿ, ಅವರ ತುತ್ತು ಅನ್ನಕ್ಕೂ ಕಲ್ಲು ಹಾಕಲು ಹೊರಟಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ. 

- Advertisement - 

ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಪಡೆಯುತ್ತಿದ್ದ 23.19 ಲಕ್ಷ ಅಸಹಾಯಕ, ಅಶಕ್ತ, ವೃದ್ಧರು, ಅಂಗವಿಕಲರು ಮತ್ತು ವಿಧವೆಯರ ಪೆನ್ಶನ್‌ ದುಡ್ಡಿಗೆ ಕೊಕ್ಕೆ ಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

 

- Advertisement - 

Share This Article
error: Content is protected !!
";