ಆಹಾರ-ತಂತ್ರಜ್ಞಾನ ಪಾಲುದಾರಿಕೆ ಬಲಪಡಿಸಲು ಮಾತುಕತೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಹಾರ-ತಂತ್ರಜ್ಞಾನ ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಟೆಟ್ರಾಪ್ಯಾಕ್ ಜೊತೆ ಮಹತ್ವದ ಮಾತುಕತೆ ನಡೆಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಸ್ವೀಡನ್ ಪ್ರವಾಸದ ವೇಳೆ ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಟೆಟ್ರಾ ಪ್ಯಾಕ್ ಸಂಸ್ಥೆಯ ಹಿರಿಯ ನಾಯಕತ್ವ ತಂಡವನ್ನು ಭೇಟಿಯಾಗಿ, ತಮ್ಮ ಕಾರ್ಯಾಚರಣೆಗಳು ಮತ್ತು ಭವಿಷ್ಯದ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದೆವು.

- Advertisement - 

ಭಾರತ, ವಿಶೇಷವಾಗಿ ಕರ್ನಾಟಕದಲ್ಲಿನ ಟೆಟ್ರಾ ಪ್ಯಾಕ್ ಸಂಸ್ಥೆಯ ತಂತ್ರಜ್ಞಾನ, ಉದ್ಯಮಿಕ ಬಂಡವಾಳ, ಮತ್ತು ಉದ್ಯೋಗ ಸೃಷ್ಟಿಯ ನೋಟಗಳನ್ನು ಅವರು ಹಂಚಿಕೊಂಡರು.

ಈ ಭೇಟಿಯಲ್ಲಿ, ನಾವು ಸ್ಟಾರ್ಟ್‌ಅಪ್‌ಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ತಂತ್ರಜ್ಞಾನ ವಿನಿಮಯ ಹಾಗೂ ಸಂಶೋಧನಾ ಸಹಕಾರಕ್ಕಾಗಿ ಅವಕಾಶಗಳನ್ನು ವಿಶ್ಲೇಷಿಸಿದೆವು ಎಂದು ಸಚಿವರು ತಿಳಿಸಿದರು.

- Advertisement - 

ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಹೂಡಿಕೆ ಹಾಗೂ ಕಾರ್ಯವಿಸ್ತಾರವನ್ನು ಮುಂದುವರಿಸಲು ಆಹ್ವಾನಿಸಿದ್ದೇವೆ. ಈ ಸಂಭಾಷಣೆಯನ್ನು ಫಲಶ್ರುತಿಯತ್ತ ಕರೆದೊಯ್ಯುವ ಆಶಯವಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

 

Share This Article
error: Content is protected !!
";