ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಾದಿಗ ಸಮುದಾಯದ ಮುಖಂಡರುಗಳು ಹಲವಾರು ವರ್ಷಗಳಿಂದ ನಮ್ಮ ಸಮುದಾಯದವರು ಶೇ 90 ಮತದಾನವನ್ನು ನಿಮಗೆ ಮಾಡಿದ್ದೇವೆ. ಸುಮಾರು 30 ವರ್ಷಗಳಿಂದ ಒಳ ಮೀಸಲಾತಿ ಹೋರಾಟವನ್ನು ಮಾಡುತ್ತಿದ್ದೇವೆ. ಹಾಗಾಗಿ ಆಗಸ್ಟ್-19 ರಂದು ನಡೆಯುವ ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಹಾಗೂ
ಸದನದಲ್ಲಿ ಒಳಮೀಸಲಾತಿ ಜಾರಿಯ ಪರವಾಗಿ ಜಸ್ಟಿಸ್ ನಾಗಮೋಹನ್ ದಾಸ್ ರವರು ನೀಡಿದ ವರದಿ ಅನುಸಾರ ಅನುಷ್ಠಾನ ಮಾಡಬೇಕೆಂದು ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕೆಂದು ನೊಂದ ಮಾದಿಗ ಸಮುದಾಯದವರಿಗೆ ಸಾಮಾಜಿಕ ನ್ಯಾಯ ನೀಡಿ ಮಾದಿಗ ಸಮಾಜಕ್ಕೆ ಧ್ವನಿಯಾಗಬೇಕೆಂದರು.
ಮಾದಿಗ ಸಮುದಾಯದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮಖಂಡರಾದ ಜಿವೇಶ್, ರಘು, ನಗರ ಸಭೆ ಸದಸ್ಯರಾದ ಸಣ್ಣಪ್ಪ, ನಾಮನಿರ್ದೇಶಿತ ಸದಸ್ಯ ವಿ.ಶಿವು ಕುಮಾರ್, ಕಾಂಗ್ರೆಸ್ ಮುಖಂಡರಾದ ಜ್ಞಾನೇಶ್, ಪ್ರದೀಪ್, ಮಹಾಂತೇಶ್, ಶಿವು, ಕರ್ಣ ಘಾಟ್, ಕಣುಮೇಶ್, ಲಕ್ಷ್ಮಣ್ ರಾವ್, ರಂಗನಾಥ್, ರಘು ಡಿಕೆ, ಬಾಲಕೃಷ್ಣ ಇದ್ದರು.

