ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ ಮ್ಯಾಸರಹಟ್ಟಿ ಗ್ರಾಮದ ಶಕ್ತಿ ದೇವತೆ ಶ್ರೀ ಮಲಿಯಮ್ಮ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೂರನೇ ಮಂಗಳವಾರದಂದು ಶ್ರೀ ಮಲಿಯಮ್ಮ ದೇವಿಯನ್ನು ವಿವಿಧ ಅಲಂಕಾರಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಡೊಳ್ಳು ಡೊಕ್ಕೆ ನಾದಗಳೊಂದಿಗೆ ಮೆರವಣಿಗೆಯ ಮೂಲಕ ವಿಶೇಷ ಪೂಜೆ ಅಲಂಕಾರ ನಡೆಯಿತು.
ಗ್ರಾಮದ ಎಲ್ಲಾ ಸಮಾಜದ ವತಿಯಿಂದ. ಬೆಳಗ್ಗೆಯಿಂದ ಪೂಜೆ ಮತ್ತು ಹರಕೆಗಳನ್ನು ವಿಧವಿಧಗಳೊಂದಿಗೆ ಜರುಗಿದವು. ಮಹಾ ಮಂಗಳಾರತಿ ನಂತರ ದೇವಿಗೆ ವಿವಿಧ ಬಗ್ಗೆಯ ಹೂಗಳಿಂದ ವಿಶೇಷ ಅಲಂಕಾರ ದೇವಾಲಯದಲ್ಲಿ ದೇವರಿಗೆ ವಿಶೇಷ ಅರ್ಚನೆ ಅಪಾರ ಭಕ್ತಾದಿಗಳು ಸಲ್ಲಿಸಿದರು.

