ಹಿರಿಯೂರಿನ ಹಲವು ಹಳ್ಳಿಗಳಲ್ಲಿ ಅ.29 ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಉಪವಿಭಾಗದ ವ್ಯಾಪ್ತಿಯ ಐಮಂಗಲ ಮತ್ತು  ಮಲ್ಲಪ್ಪನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ .29ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಚಿತ್ರದುರ್ಗ 220/66/11 ಕೆವಿ ಎಸ್.ಆರ್.ಎಸ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಾಗೂ ಐಮಂಗಳ ಮತ್ತು ಮಲ್ಲಪ್ಪನಹಳ್ಳಿ 66/11 ಕೆ.ವಿ ವಿದ್ಯುತ್ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ .29ರಂದು ಬೆಳಿಗ್ಗೆ 10 ರಿಂದ ಸಂಜೆ 4ಗಂಟೆಯವರೆಗೆ ಐಮಂಗಳ ಮತ್ತು ಮಲ್ಲಪ್ಪನಹಳ್ಳಿ ವಿ.ವಿ.ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಗುಯಿಲಾಳು, ಕಲ್ಲಹಟ್ಟಿ, ಭರಂಪುರ, ಕೆ.ಸಿ.ರೊಪ್ಪ, ಮರಡಿಹಳ್ಳಿ, ಐಮಂಗಳ, ಸಿ.ಎಸ್.ಹಳ್ಳಿ, ವದ್ದಿಕೆರೆ, ಮರಡಿದೇವಿಗೆರೆ, ದಾಸಣ್ಣನಮಾಳಿಗೆ, ಹುಲಿತೊಟ್ಟಿಲು, ತಾವಂದಿ, ಹರ್ತಿಕೋಟೆ, ಮಲ್ಲಪ್ಪನಹಳ್ಳಿ,

ಗನ್ನಾಯಕನಹಳ್ಳಿ, ಕಳವಿಬಾಗಿ, ಕೋವೇರಹಟ್ಟಿ, ಹೊಸನಾಯಕರಹಟ್ಟಿ, ಸೊಂಡೆಕೆರೆ, ಯರಬಳ್ಳಿ, ವದ್ದಿಕೆರೆ ಗೊಲ್ಲಹಳ್ಳಿ, ಮರಡಿಹಳ್ಳಿ, ಎಂ.ಡಿ.ಕೋಟೆ, ಬುರುಜಿನರೊಪ್ಪ, ಪಾಲವ್ವನಹಳ್ಳಿ, ಸಿ.ಎಸ್ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 ಗ್ರಾಹಕರು ಸಹಕರಿಸಬೇಕು ಎಂದು ಹಿರಿಯೂರು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";