ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯಿಂದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಅಯೋಜನೆ ಮಾಡಲಾಗಿತ್ತು.
ಸಭೆ ಉದ್ದೇಶಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರದಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಮಾತನಾಡಿ ಭಾರತ ದೇಶ ರಾಜ ಆಳ್ವಿಕೆ ಸಂದರ್ಭದಲ್ಲಿ ಮೇಲ್ವರ್ಗದವರು ಕೆಳ ವರ್ಗದವರಿಗೆ ಮೂಲಭೂತ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಮೂಲಕ ಅಸ್ಪೃಶ್ಯತೆಯನ್ನು ಧರ್ಮ ಶಾಸ್ತ್ರದಲ್ಲಿ ಮೊದಲು ಉಲ್ಲೇಖಿಸಲಾಗಿದೆ ಎಂದು ನಂಬಲಾಗಿದೆ. ಧಾರ್ಮಿಕ ಹಿಂದೂ ಪಠ್ಯದ ಪ್ರಕಾರ, ಅಸ್ಪೃಶ್ಯರನ್ನು ವರ್ಣ ವ್ಯವಸ್ಥೆಯ ಒಂದು ಭಾಗವಾಗಿ ಪರಿಗಣಿಸಲಾಗಿಲ್ಲ. ಆದ್ದರಿಂದ, ಅವರನ್ನು ಸವರ್ಣರಂತೆ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಪರಿಗಣಿಸಲಾಗಿದೆ ಅಸ್ಪೃಶ್ಯತೆ ಎಂದರೆ ‘ಸಮಾಜದಿಂದ ನಿರಾಕರಿಸಿದ‘ ಎಂದು ಪರಿಗಣಿಸಲ್ಪಟ್ಟ ಒಂದು ಗುಂಪನ್ನು ಬಹಿಷ್ಕರಿಸುವ ರೂಢಿಯಾಗಿದೆ,
ಆದ್ದರಿಂದ ಶೂದ್ರ ಸಮುದಾಯದಲ್ಲಿ ವಿದ್ಯಾಭ್ಯಾಸ ಮತದಾನ ಭೂಮಿ ಹಕ್ಕಿಲ್ಲ ಯಾರು ತೆರಿಗೆ ಕಟ್ಟುವವರು ಜಮೀನು ಅಸ್ತಿ ಇದ್ದವರಿಗೆ ಮತದಾನದ ಹಕ್ಕು ಇಂತಹ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯತೆ ಬಗ್ಗೆ ಅನುಭವಿಸಿ ಅದನ್ನು ಹೋಗಲಾಡಿಸಲು ಸಂವಿಧಾನ ಬರೆಯುವ ಮೂಲಕ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡಿ ಮೀಸಲಾತಿ ನೀಡುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ ಹಾಗು ಪೆರಿಯಾರ್ ರಾಮಸ್ವಾಮಿ ನಾರಾಯಣಗುರು ಇಂತಹ ಮಹಾನೀಯರು ಸಮಾಜ ಹಿಂದುಳಿದ ಹಾಗು ದೀನ ದಲಿತ ಪರವಾಗಿ ಚಳುವಳಿಗಳು ಮಾಡುವ ಮೂಲಕ ದ್ರಾವಿಡ ಚಳುವಳಿಯ ಪಿತಾಮಹ‘ ಎಂದು ಕರೆಯಲಾಗುತ್ತದೆ.
ಸಾವಿತ್ರಿಬಾಯಿ ಫುಲೆ ಅವರು 19ನೇ ಶತಮಾನದ ಪ್ರಖ್ಯಾತ ಸಮಾಜ ಸುಧಾರಕಿ, ಶಿಕ್ಷಕಿ ಮತ್ತು ಕವಯಿತ್ರಿಯಾಗಿದ್ದರು. ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೋರಾಟ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಹಾಗು ಮರಾಠರ ಭೋಂಸ್ಲೆ ರಾಜವಂಶದ ಶಾಹು ಮಹಾರಾಜರು ಪ್ರಜಾಪ್ರಭುತ್ವವಾದಿ ಮತ್ತು ಸಾಮಾಜಿಕ ಸುಧಾರಕರಾಗಿದ್ದು, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಶಿಕ್ಷಣ ಆದ್ಯತೆ ನೀಡಿ1902ರ ಆಡಳಿತಾತ್ಮಕ ಆದೇಶದ ಮೂಲಕ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿದರು,
ಶೂದ್ರರಿಗಾಗಿ 50% ಮೀಸಲಾತಿಯನ್ನು ಒದಗಿಸಿದರು ಮತ್ತು ಶೈಕ್ಷಣಿಕ ಸಮಾನತೆಗಾಗಿ ಅನೇಕ ಪಾಠ ಶಾಲೆಗಳನ್ನು ಸ್ಥಾಪಿಸಿದರು. 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸರ್ ಮಿಲ್ಲರ್ ಆಯೋಗದ ಶಿಫಾರಸಿನ ಮೇರೆಗೆ, ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 75ರಷ್ಟು ಮೀಸಲಾತಿ ನೀಡಿ ಆದೇಶಿಸಿದರು.
ಭೀಮಾ ಕೋರೆಗಾಂವ್ ಸಂಗ್ರಾಮದ ವಿಜಯೋತ್ಸವ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಪುಣೆ ಹಾಗೂ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಹಾರಾಷ್ಟ್ರಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ದಲಿತಪರ ಸಂಘಟನೆಗಳು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿ ಕಂಡು ಬಂದಿದೆ. ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೋಲಿಸ್‌ಬಂದೋಬಸ್ತ್ ಸಹಕೈಗೊಳ್ಳಲಾಗಿತ್ತು
ಓರ್ವನನ್ನು ಬಲಿ ಪಡೆದ ಭೀಮಾ ಕೋರೆಗಾಂವ್ ಹಿಂಸಾಚಾರ ಇದೀಗ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದು, ಭೀಮಾ ಕೋರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲೇ ಹೆಸರಾದ ಈ ಯುದ್ಧ ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ಎತ್ತಿ ಹಿಡಿದಿದೆ.
ದಲಿತರ ಪಾಲಿಗೆ ಅತ್ಯಂತ ಮಹತ್ವದಾಗಿದ್ದು ಏಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ 1, 1818ರಲ್ಲಿ ಐತಿಹಾಸಿಕ ಯುದ್ದ ನಡೆಯಿತು. ಈ ವೇಳೆ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ವಾಗಿತ್ತು. ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದರು. ಕೋರೆಗಾಂವ್ ಸ್ಮಾರಕದಲ್ಲಿ ಆ ಇಪ್ಪತ್ತೆರಡು ಮಹರ್ ಸೈನಿಕರ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯು ವವರೆಗೂ ಇತ್ತು. ಮಹರ್ ಸೈನಿಕರ ವೀರಗಾಥೆ ಹೇಳುವ ಸ್ಮಾರಕ ಅದು. ಪೇಶ್ವೆಗಳದು ಬ್ರಾಹ್ಮಣರ ಸೈನಿಕರೇ ಹೆಚ್ಚಿದ್ದು ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ ಐನೂರು ಮಂದಿಯಿದ್ದ ‘ಅಸ್ಪೃಶ್ಯ‘ ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ.
ಶಿರೂರಿನಿಂದ ಇಪ್ಪತ್ತೇಳು ಮೈಲು ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ಆಹಾರ, ನೀರು ಕೂಡ ಇಲ್ಲದಿದ್ದರು ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವೆಗಳಿಗೆ ಸೋಲುಂಟು ಮಾಡಿತ್ತು. ಮಹಾರಾಷ್ಟ್ರದಲ್ಲಿ ಪೇಶ್ವಾಗಳ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ. ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಈ ಯುದ್ಧವೇ ಪೇಶ್ವೆಗಳ ಆಡಳಿತದ ಅಂತ್ಯಕ್ಕೆ ಕಾರಣವಾಯಿತು.
ನೇಪಾಳ ಮತ್ತು ಪಾಕಿಸ್ತಾನದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಆದರೆ,ಭಾರತದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಅಸ್ಪೃಶ್ಯತೆ ಬಗ್ಗೆ ಅನುಭವಿಸಿ ಅದನ್ನು ಹೋಗಲಾಡಿಸಲು ಸಂವಿಧಾನದಲ್ಲಿ ಮೀಸಲಾತಿ ನೀಡುವ ಮೂಲಕ ಅಸ್ಪೃಶ್ಯರಿಗೆ ನ್ಯಾಯ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ. ರಮಾದೇವಿ. ನಾಗರಾಜ.ಜಿಲ್ಲಾಧ್ಯಕ್ಷ ಮಹದೇವ ತಾಲ್ಲೂಕು ಅಧ್ಯಕ್ಷ ನಂಜೇಶ ಉಪಾಧ್ಯಕ್ಷ ಮುನಿಂದ್ರ ಕುಮಾರ್ ಜಿಲ್ಲಾ ಸಂಯೋಜಕ ರಾಜಪ್ಪ ಜಿಲ್ಲಾಧ್ಯಕ್ಷರಾದ ನಾಗರಾಜ ಮಂಜುನಾಥ. ದೇವಪ್ಪ. ರಾಜಕುಮಾರ. ನೇರಳಘಟ್ಟ ವೆಂಕಟೇಶ. ದೇವನಹಳ್ಳಿ ನಾಗರಾಜ ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಹಾಜರಿದ್ದರು.

