ಎ.ವಿ.ಕೊಟ್ಟಿಗೆ ಏಕ ಬಳಕೆ ಪ್ಲಾಸ್ಟಿಕ್‌ ಮಕ್ತ ಗ್ರಾಮ ಘೋಷಣೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕೂನಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎ.ವಿ.ಕೊಟ್ಟಿಗೆ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್‌ ಮಕ್ತವನ್ನಾಗಿ ಘೋಷಿಸಲಾಯಿತು.

- Advertisement - 

        ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ನ ಮಿತಿ ಮೀರಿದ ಬಳಕೆಯಿಂದ ಪರಿಸರಕ್ಕೆ ತ್ಯಾಜ್ಯವಾಗಿ ಸೇರ್ಪಡೆಯಾಗುವ ಪ್ಲಾಸ್ಟಿಕ್‌ ಕೊಳೆಯದೆ ಹಾಗೆ ಮಣ್ಣಿನಲ್ಲಿ, ಪರಿಸರದಲ್ಲಿ ನೂರಾರು ವರ್ಷಗಳು ಉಳಿದು ಬಿಡುತ್ತದೆ. ಇದರಿಂದ ಪರಿಸರ ಮಾಲಿನ್ಯ ಹಾಗೂ ಅಸಮತೋಲನ ಉಂಟಾಗುತ್ತದೆ. ಭೂಮಿ ಕಲುಷಿತವಾಗುತ್ತದೆ.

- Advertisement - 

ತ್ಯಾಜ್ಯ ಬೆಟ್ಟದಂತೆ ಎಲ್ಲಾ ನಗರ ಹಾಗೂ ಗ್ರಾಮಗಳಲ್ಲಿ ಬೆಳೆಯುತ್ತದೆ, ಇದಕ್ಕೆ ಪರಿಹಾರವೆಂದರೆ ಏಕ ಬಳಕೆ ಪ್ಲಾಸ್ಟಿಕ್‌ಗೆ ವಿದಾಯವೊಂದೇ, ಜಿಲ್ಲಾ ಪಂಚಾಯತಿ ವತಿಯಿಂದ ಪ್ಲಾಸ್ಟಿಕ್‌ ತ್ಯಾಜ್ಯ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಗ್ರಾಮಗಳಾದ ಲಕ್ಕವ್ವನಹಳ್ಳಿ, ಮಾಯಸಂದ್ರ, ಶಿಡ್ಲಯ್ಯನಹಟ್ಟಿ, ಕೂನಿಕೆರೆ, ಹುಚ್ಚವ್ವನಹಳ್ಳಿ, ಕೆರೆಕೋಡಿಹಟ್ಟಿ ಸೀಗೇಹಟ್ಟಿ, ಕ್ಯಾತೇದೇವರಹಟ್ಟಿ, ಎ.ವಿ.ಕೊಟ್ಟಿಗೆ ಹಾಗೂ ದೊಡ್ಡಘಟ್ಟ ಗ್ರಾಮಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ರಹಿತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದಾರೆ.

- Advertisement - 

ಪ್ರಪ್ರಥಮವಾಗಿ ಎ.ವಿ.ಕೊಟ್ಟಿಗೆ ಗ್ರಾಮದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಮುಕ್ತ ಗ್ರಾಮವನ್ನಾಗಿ ಘೋಷಿಸಲು ಪ್ರಯೋಗೀಕವಾಗಿ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮಸ್ಥರಿಗೆ, ಯುವಕ ಯುವತಿಯರಿಗೆ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.  ಹಾಗೂ ಗ್ರಾಮದ ಪ್ರತಿ ಮನೆಗೂ ಬಟ್ಟೆ ಬ್ಯಾಗ್‌ ವಿತರಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧಕ್ಕೆ ಇದು ಉತ್ತಮ ಮುನ್ನುಡಿಯಾಗಬಲ್ಲದು ಎಂಬ ಉದ್ದೇಶದಿಂದ ಗ್ರಾಮಸ್ಥರಿಗೆ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ತ್ಯಜಿಸಿ ಬಟ್ಟೆ ಬ್ಯಾಗನ್ನು ಬಳಸಲು ಜಾಗೃತಿ ಮೂಡಿಸಲಾಯಿತು.

ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಸ್ಥಳೀಯ ಯುವಕರಾದ ಸುರೇಶ್‌ ಮತ್ತು ಸ್ನೇಹಿತರು ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುಷ್ಮಾರಾಣಿ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಗ್ರಾಮದಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯಗಳ ಕಪ್‌ಗಳು, ಪ್ಲಾಸ್ಟಿಕ್‌ ಬ್ಯಾಗ್‌, ಬಾಟಲಿ, ಇತರೆ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬಳಸಿ ಇಟ್ಟಿಗೆಯನ್ನು ಕೂಡ ಇವರು ತಯಾರಿಸಲು ಆಲೋಚಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಗಾಗಿ ತಮ್ಮ  ಗ್ರಾಮ ಪಂಚಾಯ್ತಿಯಲ್ಲಿ ಪರಿಸರ ಸಂರಕ್ಷಣೆಗೆ ಈ ಗ್ರಾಮದಲ್ಲಿ ಪ್ರಯೋಗ ಯಶಸ್ವಿಯಾದಲ್ಲಿ ನಂತರ ಹಂತ ಹಂತವಾಗಿ ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಿಗೂ ವಿಸ್ತರಿಸುವ ಯೋಜನೆ ಹೊಂದಿದ್ದಾರೆ.

 ಪ್ಲಾಸ್ಟಿಕ್‌ ಬಳಕೆಯನ್ನು ನಿಶೇಧಿಸುವುದರಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯ, ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುವುದು ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರು , ಗ್ರಾಮಸ್ಥರು,ಯುವಕ ಯುವತಿ ಮಂಡಳಿಗಳು, ಮಹಿಳಾ ಸ್ತ್ರೀಶಕ್ತಿ ಸಂಘಗಳು ಕಾರ್ಯನಿರ್ವಹಿಸುವಂತೆ ಪಿಡಿಒ  ಕರೆ ನೀಡಿದರು. ಸ್ಥಳೀಯ ಅಂಗಡಿಗಳಲ್ಲಿ 20 ಮೈಕ್ರಾನ್‌ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ನಿಷೇಧಿಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಸೀತಾರಾಮ್‌ ಎಲ್‌ ಪಿ ಮಾತನಾಡಿ ಹುಷಾರಿಲ್ಲ  ಎಂದರೆ ಆಸ್ಪತ್ರೆಗೆ ದಾಖಲು ಆದಾಗ  oxygen ಸಿಲಿಂಡರ್ ಅಳವಡಿಸಿದಾಗ ಎಷ್ಟು ಖರ್ಚಾಗುತ್ತದೆ. ಆದರೆ  ಅಂಥ ಶುದ್ಧ ಗಾಳಿಯನ್ನು ನೀಡುವಂತಹ    ಗಿಡ ಮರಗಳನ್ನು ನಾವು ಎಷ್ಟು ಕಾಳಜಿಯಿಂದ ಬೆಳೆಸಬೇಕು. ನಮ್ಮ ಪರಿಸರ ಕ್ಕೆ ಏನಾದರೂ ಕೊಡುಗೆ ನೀಡಬೇಕು ಮತ್ತು ನಮ್ಮ ಪರಿಸರ ವನ್ನು ಸಂರಕ್ಷಿಸಲು ಕರೆ ನೀಡಿದರು.

ಎ.ವಿ.ಕೊಟ್ಟಿಗೆ ಗ್ರಾಮದ ಸದಸ್ಯ ಎನ್‌ ವಿ ರಾಜಣ್ಣ, ಪಾರ್ಥೇಶ್‌ ಸಿ,  ಈರಣ್ಣಗ್ರಾಮದ  ಮುಖಂಡರಾದ ಗೋವಿಂದಪ್ಪ, ಉದಯ ಶಂಕರ್, ಮುನ್ನಾ, ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಎನ್ ಆರ್ ಎಲ್ ಎಂ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು  ಭಾಗವಹಿಸಿದ್ದರು.
ಗ್ರಾಮದ ಯುವಕ ಸುರೇಶ್ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದಂತೆ
ಖಾಲಿ ಬಾಟಲಿಯಲ್ಲಿ ಹಾಕಿ ಅದನ್ನು ಇಟ್ಟಿಗೆ ತಯಾರಿಕೆಗೆ ಬಳಸಬಹುದು ಎಂದರು.

ಇದೇ ಸಂದರ್ಭದಲ್ಲಿ ಹಸಿ ಒಣ ಕಸ ವಿಗಂಡನೆಗಾಗಿ ಮನೆ ಮನೆಗೆ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.
ಮನೆ ಮನೆಗೆ ಕಾಟನ್‌ ಬ್ಯಾಗ್‌ ವಿತರಣೆ ಮಾಡಲಾಯಿತು. ಶಾಪಿಂಗ್‌ / ಮಾರುಕಟ್ಟೆಗೆ ಹೋಗುವಾಗ ತಪ್ಪದೇ ಬಟ್ಟೆ ಬ್ಯಾಗ್‌ ತೆಗೆದುಕೊಂಡು ಹೋಗುವ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು.

ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಜಾಗೃತಿಗಾಗಿ zero waste challenge ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಪ್ಲಾಸ್ಟಿಕ್‌ ತ್ಯಾಜ್ಯ ಬಗ್ಗೆ ಅರಿವು ಮೂಡಿಸಿ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕಾಗಿ ಗ್ರಾಮದಲ್ಲಿ ಜಾಥಾ ನಡೆಸಲಾಯಿತು. ಎ ವಿ ಕೊಟ್ಟಿಗೆ ಗ್ರಾಮದ ಆಸ್ಪತ್ರೆಯ ಆವರಣದಲ್ಲಿ ಗಿಡ ನೆಡಲಾಯಿತು.  

Share This Article
error: Content is protected !!
";