ಶೋಭಾಯಾತ್ರೆಯಲ್ಲಿ ನಟ ದರ್ಶನ್ ಬಾವುಟ ಪ್ರದರ್ಶನಕ್ಕೆ ಬ್ರೇಕ್ ಹಾಕಿದ ಪೊಲೀಸರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಕೊಲೆ ಆರೋಪಿ ಚಿತ್ರನಟ ದರ್ಶನ್ ಭಾವ ಚಿತ್ರ ಇದ್ದ ಬಾವುಟ ಪ್ರದರ್ಶನ ಮಾಡಲು ಮುಂದಾದ ಅಭಿಮಾನಿಗಳ ಕಾರ್ಯಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.

- Advertisement - 

ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ನಟ ದರ್ಶನ್ ಭಾವಚಿತ್ರವಳ್ಳ ಬಾವುಟಗಳ ದೃಶ್ಯ ಕಂಡು ಬಂದಿದ್ದು ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ತೆರವುಗೊಳಿಸಿದರು.

- Advertisement - 


ಬಾವುಟದಲ್ಲಿ ಏನಿತ್ತು-
ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯಲ್ಲಿ ದರ್ಶನ್ ಅಭಿಮಾನಿಗಳು ಬೃಹತ್ ಗಾತ್ರದ ದರ್ಶನ್ ಭಾವಚಿತ್ರ ಇರುವ ಏನ್ರೀ ಮೀಡಿಯಾ ಎಂಬ ಬಾವುಟವನ್ನ ಕೈನಲ್ಲಿ ಹಿಡಿದು ದರ್ಶನ್ ಪರ ಘೋಷಣೆಗಳನ್ನ ಕೂಗುತ್ತಿದ್ದರು.

 ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ದರ್ಶನ್ ಅಭಿಮಾನಿಗೆ ದರ್ಶನ್ ಬಾವುಟವನ್ನ ಹಾರಿಸಬೇಡಿ ಎಂದು ತಿಳಿಸಿದ್ದಾರೆ. ಕೆಲ ಹೊತ್ತು ದರ್ಶನ ಅಭಿಮಾನಿಗಳು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

- Advertisement - 

ಅಷ್ಟರಲ್ಲಿ ಪೊಲೀಸರು ಬಾವುಟವನ್ನು ಕಸಿದುಕೊಂಡು ತಮ್ಮ ವಶಕ್ಕೆ ಪಡೆದರು. ಇದರಿಂದಾಗಿ ದರ್ಶನ್ ಅಭಿಮಾನಿಗಳು ಸಪ್ಪೆ ಮೊರೆ ಹಾಕಿಕೊಂಡು ಸ್ಥಳದಿಂದ ಕಾಲ್ಕಿಳಬೇಕಾಯಿತು.

 

 

 

Share This Article
error: Content is protected !!
";