ಪೂರ್ಣಗೊಳ್ಳದ ರಸ್ತೆ ಅಗಲೀಕರಣ, ತಪ್ಪದ ಕಿರಿಕಿರಿ!?

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ವರ್ಷ ಕಳೆದರು ಕಾಮಗಾರಿ ಪೂರ್ಣಗೊಂಡಿಲ್ಲ ಈ ಅವ್ಯವಸ್ಥೆಯಿಂದ ಹಿರಿಯೂರು ನಗರದ ಮುಖ್ಯರಸ್ತೆ ಕೆಸರು ಗದ್ದೆಯಂತಾಗಿದ್ದು ವಾಹನಗಳು ಸವಾರರು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗುದ್ದಲಿ ಪೂಜೆ ಮಾಡಿ ವರ್ಷ ಕಳೆದರೂ ಇದುವರೆಗೂ ಕಾಮಗಾರಿ ಕೆಲಸ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ರಸ್ತೆ ಅಗಲೀಕರಣ ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾರ್ಯ ನಿರ್ವಹಣೆಯಿಂದ ತೀವ್ರ ತೊಂದರೆಯಾಗುತ್ತಿದೆ. ಇದರ ಮಧ್ಯ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಮುಖ್ಯ ರಸ್ತೆಗಳೆಲ್ಲ ಹದಗೆಟ್ಟಿದ್ದು ಗುಂಡಿಗಳು ನಿರ್ಮಾಣವಾಗಿವೆ.

- Advertisement - 

ಇದರಿಂದ ರಸ್ತೆಗಳಲ್ಲಿ ವಾಹನಗಳು ಸುರಕ್ಷಿತವಾಗಿ ಓಡಾಡಲು ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯರಸ್ತೆ ಅಗಲೀಕರಣದ ಕಾಮಗಾರಿ ಗುತ್ತಿಗೆ ಪಡೆದಂತಹ ಗುತ್ತಿಗೆದಾರನ ವಿಳಂಬ ನೀತಿಯಿಂದಾಗಿ ಸಾರ್ವಜನಿಕರು ಯಮಯಾತನೆ ಪಡುವಂತಾಗಿದೆ. ಮುಖ್ಯ ರಸ್ತೆಯ ತಾಲೂಕು ಕಚೇರಿ ಸಮೀಪ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಕೆಸರು ಗದ್ದೆಯಂತಾಗಿದ್ದು ವಾಹನಗಳು ಸುರಕ್ಷಿತವಾಗಿ ಸಂಚರಿಸುವುದಕ್ಕಂತೂ ತುಂಬಾ ಕಷ್ಟವಾಗಿದೆ. ಗುತ್ತಿಗೆದಾರ ಅನುಸರಿಸುತ್ತಿರುವ ಮಂದಗತಿಯೇ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ರಸ್ತೆ ತುಂಬೆಲ್ಲಾ ಮಳೆ ನೀರು ತುಂಬಿರುವುದು ಒಂದು ಕಡೆಯಾದರೆ, ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ಓಡಾಡಲು ಕಷ್ಟ ಪಡುತ್ತಿದ್ದಾರೆ. ಕಾಮಗಾರಿ ವಿಳಂಬ ರೀತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement - 

ಹಿರಿಯೂರು ನಗರದ ಟಿಬಿ ವೃತದಿಂದ ತಾಲೂಕು ಕಚೇರಿಯವರಿಗೂ ರಸ್ತೆಯ ಅಗಲೀಕರಣ ನಡೆಯುತ್ತಿದ್ದು ಒಂದಲ್ಲ ಒಂದು ಸಮಸ್ಯೆ ಉದ್ಭವವಾಗಿ ರಸ್ತೆ ಅಗಲೀಕರಣ ಆಮ ಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.

ರಸ್ತೆ ಅಗಲೀಕರಣ ಮಾಡುವ ಮುಂಚೆ ಅಗತ್ಯ ಕಾಮಗಾರಿಗಳನ್ನು ಮಾಡಿಕೊಳ್ಳಬೇಕು. ಆ ಕೆಲಸ ಮಾಡಿಕೊಳ್ಳದ ಗುತ್ತಿಗೆದಾರರು ಸಮಸ್ಯೆಗಳನ್ನು ತಂದು ಹಾಕಿದ್ದಾರೆ. ರಸ್ತೆ ಅಗಲೀಕರಣ ತಡವಾಗಲು ಕುಡಿಯುವ ನೀರಿನ ಪೈಪ್ ಲೈನ್ ಸಮಸ್ಯೆ ಎನ್ನುವ ಸಬೂಬು ಹೇಳಲಾಗುತ್ತಿದೆ. ಕುಡಿಯುವ ನೀರಿನ ಕಾಮಗಾರಿ ತಡವಾಗಿದ್ದರಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ. ಜೊತೆಗೆ ನಿರಂತರವಾಗಿ ಮಳೆ ಸುರಿಯುತ್ತಿದ್ದು ರಸ್ತೆ ಕಾಮಗಾರಿ ನಿರ್ವಹಿಸಲು  ಸಮಸ್ಯೆಯಾಗಿದೆ ಎನ್ನುವ ಸಬೂಬಿನ ಮಾತುಗಳು ಕೇಳಿ ಬರುತ್ತಿವೆ.

ತಾಲೂಕು ಕಚೇರಿ ಸಮೀಪದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಅತಿ ಶೀಘ್ರ ಕಾಮಗಾರಿ ಮುಗಿಯುವ ಭರವಸೆಯನ್ನು ನಗರಸಭೆ ಅಧಿಕಾರಿಗಳು ನೀಡುತ್ತಿದ್ದರೂ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಶಾಪಹಾಕುತ್ತಿದ್ದಾರೆ. ಸತತ ಮಳೆಯಿಂದ ಅರಣ್ಯ ಇಲಾಖೆ ಮುಂಭಾಗ ತಗ್ಗು ಗುಂಡುಗಳು ಜಾಸ್ತಿಯಾಗಿದ್ದು ಓಡಾಡಲು ವಾಹನ ಸವಾರರು ಅರಸಹಾಸ ಪಡಬೇಕಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನಗರಸಭೆ ವತಿಯಿಂದ ಸಾಕಷ್ಟು ಬಾರಿ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ.

ಆದರೆ ದೊಡ್ಡ ದೊಡ್ಡ ತಗ್ಗು, ಗುಂಡಿಗಳಿರುವುದರಿಂದ ಎಷ್ಟೇ ಗುಂಡಿ ಮುಚ್ಚಿದರು ನೀರು ಹರಿಯುವುದರಿಂದ ಎಷ್ಟೇ ಮಣ್ಣು ಹಾಕಿದರು ನಿಲ್ಲುವುದಿಲ್ಲ. ಮಳೆ ನೀರು ರಸ್ತೆಯಿಂದ ಹೊರ ಹೋಗುವ ರೀತಿಯಲ್ಲಿ ಮಾಡಬೇಕು. ನಂತರ ಅದರ ಮೇಲೆ ಟಾರ್ ಹಾಕಿದರೆ ನಿಲ್ಲುತ್ತದೆ ಅತಿ ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂಬ ಮಾತನ್ನು ಅಧಿಕಾರಿಗಳು ತಿಳಿಸುತ್ತಿದ್ದರೂ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಯಾವುದೇ ನಂಬಿಕೆ ಬರುತ್ತಿಲ್ಲ.

ರೋಡ್ ಜಾಮ್- ರಸ್ತೆ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ನೂರಾರು ವಾಹನಗಳ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸದಾ ರಸ್ತೆ ಜಾಮ್ ಆಗಿ ಮತ್ತೊಷ್ಟು ಕಿರಿಕಿರಿ ಉಂಟಾಗುತ್ತಿದ್ದರೂ ಇದರ ಕಡೆ ಯಾರೊಬ್ಬರೂ ಗಮನ ನೀಡದಿರುವುದು ಸೋಜಿಗವಾಗಿದೆ.

ನೀರಿನ ಪೈಪ್ ಲೈನ್ ತಡವಾದ್ದರಿಂದ ರಸ್ತೆ ಅಗಲೀಕರಣ ವಿಳಂಬವಾಗಿದೆ ಮಳೆ ಬರೆದಿದ್ದರೆ ಒಂದು ಕಡೆ ಟಾರ್  ಹಾಕಲಾಗುತ್ತಿತ್ತು ಮಳೆ ನಿಂತರೆ ಶೀಘ್ರದಲ್ಲಿ ಟಾರ್ ಹಾಕಲಾಗುವುದು. ರಸ್ತೆ ಕಾಮಗಾರಿ ಒಂದು ಕಡೆ  80% ರಸ್ತೆ ಕಾಮಗಾರಿ ಒಂದು ಹಂತಕ್ಕೆ ಬಂದಿದ್ದು ಶೀಘ್ರದಲ್ಲಿ ಟಾರ ಹಾಕಲಾಗುವುದು ನೀರಿನ ಪೈಪ್ ಲೈನ್ ಕಾಮಗಾರಿ ಮುಗಿತಾ ಬಂದಿದ್ದು ಹಾಗೂ ಮಳೆ ಸುರಿತ್ತಿರುವುದರಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ ಅರಣ್ಯ ಇಲಾಖೆ ಮುಂಭಾಗ ಮಳೆ ಬಂದು ತಗ್ಗು ಗುಂಡಿಗಳಾಗಿದ್ದ ಎಚ್ಚೆತ್ತುಕೊಂಡು ಶೀಘ್ರವೇ ಮುಚ್ಚಲಾಯಿತು”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

 

 

Share This Article
error: Content is protected !!
";