ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಕಣಿವೆಮಾರಮ್ಮ ದೇವಸ್ಥಾನದ ಮುಂದಿನ ಜಲ್ದಿ ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಪುರಷನ ಶವ ಪತ್ತೆಯಾದ ಕುರಿತು ಜೂನ್ 03 ರಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾಮಾಧೇಯ ಸುಮಾರು 40 ರಿಂದ 45 ವರ್ಷದವನಾಗಿದ್ದು, ತಲೆಯಲ್ಲಿ ಕಪ್ಪು ಮತ್ತು ಬಿಳಿ ಕೂದಲು, 5.6 ಅಡಿ ಎತ್ತರ, ಮೈಮೇಲೆ ನೀಲಿ ಬಣ್ಣದ ಕಾಚ ಧರಿಸಿರುತ್ತಾನೆ. ದೇಹವು ಪೂರ್ತಿಯಾಗಿ ಕೊಳೆತಿರುವ ಸ್ಥಿತಿಯಲ್ಲಿದ್ದು, ಚಹರೆ ಗುರುತು ಕಂಡು ಬಂದಿರುವುದಿಲ್ಲ. ಮೃತ ವ್ಯಕ್ತಿಯ ಕೈ ಮೇಲೆ ‘ಸಿದ್ದಅಪ್ಪ’ ಎಂದು ಅಚ್ಚೆ ಇರುತ್ತದೆ.
ಮೃತ ಅನಾಮಧೇಯ ವ್ಯಕ್ತಿಯ ಕುರಿತು ಮಾಹಿತಿ ತಿಳಿದುಬಂದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08193 263555, ಅಥವಾ ಮೊಬೈಲ್ 9480803115 ಕರೆ ಮಾಡುವಂತೆ ಪೊಲೀಸ್ ಉಪ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.