ದಲಿತ ವಿರೋಧಿ ಸಿದ್ದರಾಮಯ್ಯ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ದಲಿತ ವಿರೋಧಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿ ಬೆಂಗಳೂರಿನ ದಲಿತರ ಮನೆಗಳು, ಅಂಬೇಡ್ಕರ್ ಕಾಲೋನಿಗಳನ್ನು ಕಬ್ಜ ಮಾಡಿಕೊಂಡು ಸರ್ವನಾಶ ಮಾಡುತ್ತಿರುವುದಕ್ಕೆ ಬೇಗೂರಿನಲ್ಲಿ ರಾತ್ರೋ ರಾತ್ರಿ ದಲಿತರ ಮನೆಗಳು ಹಾಗೂ ದೇವಸ್ಥಾನ ಧ್ವಂಸ ಮಾಡಿರುವುದೇ ಸಾಕ್ಷಿ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರೇ, ದಲಿತರ ಮನೆಗಳನ್ನು ಧ್ವಂಸ ಮಾಡಿರುವ ಜಾಗದಲ್ಲಿ ನಿಮ್ಮದೆಷ್ಟು ಪಾಲಿದೆ? ಬಿಜೆಪಿ ಪ್ರಶ್ನಿಸಿದೆ.