ಗಂಗಾಮತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಗಂಗಾಮತ ಸಮಾಜದ ಅರ್ಹ ವಿದ್ಯಾರ್ಥಿಗಳಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ಲಿಖಿತ ಅರ್ಜಿ ಜೊತೆಗೆ ಅಂಕಪಟ್ಟಿ ಜಾತಿ ಪತ್ರದೊಂದಿಗೆ 2024 ನವೆಂಬರ್ 10 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

2023-24ನೇ ಸಾಲಿನಲ್ಲಿ ಶ್ರೀ ಗಂಗಾ ವಿದ್ಯಾಸಿರಿ ಯೋಜನೆಯಡಿ ಎಂಬಿಬಿಎಸ್, ಡೆಂಟಲ್, ಬಿಎಎಂಎಸ್, ಬಿ., ಬಿ.ಎಸ್ಸಿ (ಎಜಿ/ಹಾರ್ಟ್) ಸೇರಿದಂತೆ ವಿವಿಧ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು

ಹಾಗೂ ಐಎಎಸ್, ಕೆಎಎಸ್ ತರಬೇತಿ ಪಡೆಯುತ್ತಿರುವ ಸಮಾಜದ ಬಡ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಆರ್ಥಿಕವಾಗಿ ಪುರಸ್ಕರಿಸಲು ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಅರ್ಹ ವಿದ್ಯಾರ್ಥಿಗಳು ನಿಗಧಿತ ಅರ್ಜಿ ನಮೂನೆಯಲ್ಲಿ ಅಂಕಪಟ್ಟಿ, ಜಾತಿ ಪತ್ರ, ಪೋಟೋ, ಕಾಲೇಜಿನ ದೃಢೀಕರಣ ಹಾಗೂ ಬ್ಯಾಂಕ್  ವಿವರಗಳೊಂದಿಗೆ 2024 ನವೆಂಬರ್ 10 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು 7259726367 ಮೊಬೈಲ್ ಸಂಖ್ಯೆಗೆ  ಸಂಪರ್ಕಿಸಬಹುದು ಹಾಗೂ ರಾಜ್ಯ ಸಂಘದಿಂದ ನೀಡಲಾಗಿರುವ  ಪ್ರಕಟಣೆ ಗಮನಿಸಬೇಕು ಹಾಗೂ ವೆಬ್ಸೈಟ್  http/ksgewa.comನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಚಿತ್ರದುರ್ಗ ಜಿಲ್ಲಾ ಗಂಗಾಮತ ನೌಕರರ  ಸಂಘದ ಅಧ್ಯಕ್ಷ ಬಿ.ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";