ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ- ಅರುಣ್ ಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಕೆ.ಎಂ.ಸಂದೇಶ್ ಸ್ಥಾಪಿತ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ದೊಡ್ಡಬಳ್ಳಾಪುರದಲ್ಲಿ ಸಕ್ರಿಯವಾಗಿದ್ದು
, ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಹೋರಾಟ ಮಾಡುವುದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ತಿಳಿಸಿದ್ದಾರೆ. 

- Advertisement - 

ಕೆ.ಎಂ.ಸಂದೇಶ್ ನೇತೃತ್ವದ ಹೋರಾಟಗಳು ರಾಜ್ಯದಲ್ಲಿ ಸಂಚಲನ ಮೂಡಿಸಿದೆ, ದಲಿತರ ಮೇಲಾಗುತ್ತಿರುವ ದೌರ್ಜನ್ಯ ವಿರುದ್ಧ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಿದ್ದಾರೆ‌. ದಲಿತರ ಜಮೀನು ಕಬಳಿಸುವ ಭೂಮಾಲೀಕರ ವಿರುದ್ಧ ಹೋರಾಟ ನಡೆಸುತ್ತಿರುವ ಅವರು ಸಾವಿರಾರು ಎಕರೆ ದಲಿತರ ಜಾಮೀನು ರಕ್ಷಣೆ ಮಾಡಿ ದಲಿತರಿಗೆ ನ್ಯಾಯ ಕೊಡಿಸಿದ್ದಾರೆ, ಅವರು ಸ್ಥಾಪಿತ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ದೊಡ್ಡಬಳ್ಳಾಪುರದಲ್ಲಿಯೂ ಸಕ್ರಿಯವಾಗಿದ್ದು, ತಾಲೂಕಿನಲ್ಲಿ ದಲಿತರ ಪರವಾಗಿ ಹೋರಾಟ ಮಾಡುವುದ್ದಾಗಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಕೊಡಿಗೇಹಳ್ಳಿ ತಿಳಿಸಿದ್ದಾರೆ. 

- Advertisement - 

ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಿಯಲ್ ಎಸ್ಪೇಟ್ ಮಾಫಿಯಾ ಕಾಲಿಟ್ಟಿದ್ದು ದಲಿತರ ಜಮೀನು ಕಬಳಿಸಲು ಸಂಚು ನಡೆಸುತ್ತಿದ್ದಾರೆ, ಇವತ್ತಿಗೂ ತಾಲೂಕಿನಲ್ಲಿ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವಿಲ್ಲ.ಬೆಂಗಳೂರಿಗೆ ಕೂಗಳತೆಯ ದೂರದಲ್ಲಿದ್ದರು ದಲಿತರ ಮೇಲಿನ  ದಬ್ಬಾಳಿಕೆ ನಿಂತಿಲ್ಲ, ದಲಿತರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಅಂಬೇಡ್ಕರ್ ಸೇವಾ ಸಮಿತಿ ಖಂಡಿಸುವುದರ ಜೊತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು.

 

- Advertisement - 

Share This Article
error: Content is protected !!
";