ಅಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯ ಪಾಂಚ ಜನ್ಯದಲ್ಲಿ ಅಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನವನ್ನೂ ಬಿಜೆಪಿ ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನಿ ಅವರು ಉದ್ಘಾಟಿಸಿದರು.

- Advertisement - 

ಅಟಲ್ ಜೀ ಕುರಿತ ಚಿತ್ರ ಪ್ರದರ್ಶನ ಮಾಡಲಾಯಿತು ಮತ್ತು ಅಟಲ್ ಜೀ ಜನ್ಮಶತಮಾನೋತ್ಸವದ ಅಂಗವಾಗಿ ಮಂಡಲದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿದ ಸಂಕಲಿತ ಚಿತ್ರ ಪ್ರದರ್ಶನ ನಡೆಯಿತು.

- Advertisement - 

ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷರಾದ ಎಂ. ಆರ್. ದೇವರಾಜ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಸಿ. ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಎ ನರೇಂದ್ರ, ಅಭಿಯಾನದ ಜಿಲ್ಲಾ ಪ್ರಮುಖರಾದ  ಸಿ. ಎಚ್ ಲೋಕೇಶ್, ಜಿಲ್ಲಾ ಸಂಚಲಕಿ ಚೈತ್ರಶ್ರೀ ಮಾಲತೇಶ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

- Advertisement - 
Share This Article
error: Content is protected !!
";