ಶ್ರಮದ ಫಲದಿಂದ ಹುದ್ದೆಗಳು ಪಡೆದಿದ್ದೇನೆ ಬಿಕ್ಷೆಯಿಂದಲ್ಲ-ಬಿ.ಸಿ ಆನಂದ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಾನು ಮಾಜಿ ಶಾಸಕ ವೆಂಕಟರಮಣಯ್ಯ ಅವರಿಗಿಂತಲೂ ಹಿಂದಿನಿಂದಲು ಕಾಂಗ್ರೆಸ್ ಪಕ್ಷಕ್ಕಾಗಿ
  ಸಕ್ರಿಯವಾಗಿ ದುಡಿದಿದ್ದು ಬಮೂಲ್ ನಿರ್ದೆಶಕ ಸ್ಥಾನ ಸೇರಿದಂತೆ ಪಂಚಾಯತಿ ಸದಸ್ಯನಾಗಿ ಪಕ್ಷದ ಕಾರ್ಯಕರ್ತನಾಗಿ ಹುದ್ದೆಗಳನ್ನು ಗಳಿಸಿದ್ದೇನೆ ಹೊರತು ನಿಮ್ಮ ಬಿಕ್ಷೆಯಿಂದಲ್ಲ ಎಂದು ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ವೆಂಕಟರಮಣಯ್ಯ ರವರ ಆರೋಪದ ವಿರುದ್ದ ಗುಡುಗಿದ್ದಾರೆ.

- Advertisement - 

ನಗರದ ಬಮೂಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾನು 1995 ರಿಂದಲೇ  ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು ಮಾಜಿ ಶಾಸಕ ವೆಂಕಟರಮಣಯ್ಯರವರು ರಾಜಕಾರಣದಲ್ಲಿ ಸಕ್ರಿಯವಾಗುವ ಮುನ್ನವೇ ಗ್ರಾಮಪಂಚಾಯ್ತಿ ಸದಸ್ಯನಾಗಿ-ಉಪಾದ್ಯಕ್ಷನಾಗಿ ನಂತರ ಅದ್ಯಕ್ಷನಾಗಿದ್ದೆ.

- Advertisement - 

ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದು ನಾನು ಪಕ್ಷ ಕ್ಕಾಗಿ ನಿಷ್ಟೆಯಿಂದ ದುಡಿದಿದ್ದು 1997 ರಲ್ಲಿ ಮಜರಾಹೊಸಹಳ್ಳಿ ಗ್ರಾಮ ಪಂಚಾಯ್ತಿ ಕಾಂಗ್ರೆಸ್ ತೆಕ್ಕೆಗೆ ಬರಲು ಶ್ರಮಿಸಿದ್ದು, ಮಾಜಿ ಶಾಸಕರುಗಳಾದ ಜೆ.ನರಸಿಂಹ ಸ್ವಾಮಿ,ಆರ್ ಜಿ ವೆಂಕಟಾಚಲಯ್ಯ ರವರುಗಳ ಗೆಲುವಿಗೂ ಶ್ರಮಿಸಿದ್ದು ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಆದ ಕಾರಣ ಈಗಿನ ಹಾಲಿ ಶಾಸಕ ಧೀರಜ್ ಮುನಿರಾಜು ಸಹ ಉತ್ತಮ ವ್ಯಕ್ತಿಯೆಂದು ಬೆಂಬಲಿಸಿದ್ದೇನೆ ಭ್ರಷ್ಟಾಚಾರ ಮಾಡುವವರು ಯಾರೇ ಆದರು ನಾನು ಬೆಂಬಲಿಸುವುದಿಲ್ಲ ಎಂದರು.

ಬಮೂಲ್ ಚುನಾವಣೆಗೆ ನನ್ನ ಯೋಗ್ಯತೆ ನೀಡಿ ಸ್ಪರ್ದಿಸಲು ಅವಕಾಶ ದೊರೆಯಿತೆ ವಿನಹ ಬಿಕ್ಷೆಯಿಂದಲ್ಲ,ಚುನಾವಣೆಗೆ ಮಾಜಿ ಶಾಸಕರ ಸಹೋದರರನ್ನು ಏಕೆ ನಿಲ್ಲಿಸಲಿಲ್ಲ ,ದೊಡ್ಡಬಳ್ಳಾಪುರದಲ್ಲಿ ಇನ್ನೂ ಮಾನವೀಯತೆ ಇದೆ ಎಂದು ಈ ಬಾರಿಯ ಬಮೂಲ್ ಚುನಾವಣೆ ತೋರಿಸಿಕೊಟ್ಟಿದೆ ಎಂದರು.

- Advertisement - 

ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪರವರು ಶಾಸಕಾರಾಗಿದ್ದಾಗ ಬಗರ್ ಹುಕುಂನಲ್ಲಿ 3000 ಎಕರೆ ಭೂಮಿಯನ್ನು  ರೈತರಿಗೆ ಮಂಜೂರು ಮಾಡಿಸಿಕೊಟ್ಟರು ತಾವು 10 ವರ್ಷ ಶಾಸಕರಾಗಿ ನೀವೆಷ್ಟು ಕೊಡಿಸಿದ್ದೀರಿ.ನಿಮ್ಮ ಅಧಿಕಾರದ ಅವದಿಯಲ್ಲಿ ನಿಮ್ಮನ್ನು ಒಳ್ಳೆಯವರೆಂದು ಯಾವೊಬ್ಬ ಅಧಿಕಾರಿ ಬಾಯಲ್ಲಾದರು ಹೇಳಿಸಿ ನೋಡೋಣ ಆ ಕ್ಷಣವೇ ನಾನು ರಾಜಿನಾಮೆ ನೀಡುವೆ ಎಂದರು. 

ನಾನು ಮೊದಲಿಂದಲೂ ಡಿ.ಕೆ ಶಿವಕುಮಾರ್ ರವರ ಅಭಿಮಾನಿ ಕೆ.ಪಿ.ಸಿ.ಸಿ ವಕ್ತಾರರು ಆರೋಪಿಸಿದಂತೆ ನಾನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಅಭಿನಂದಿಸಲು ರಾತ್ರೋರಾತ್ರಿ ಹೋಗಿಲ್ಲ ತಾಲ್ಲೂಕಿನಲ್ಲಿ ಬಮೂಲ್ ಉತ್ಪನ್ನಗಳ ಘಟಕಕ್ಕೆ ಮಂಜೂರು ಮಾಡಿದ್ದು ಬಮೂಲ್ ನಲ್ಲಿ ಸಾಕಷ್ಟು ಕೆಲಸಗಳಾಗಬೇಕಿದ್ದು ಈ ಕಾರಣಕ್ಕೆ ಅವರ ಮೇಲಿನ ಅಭಿಮಾನದಿಂದ ಹಾರಹಾಕಿ ಬಂದೆ ಎಂದರು.

   ಅಪ್ಪನ ಬಗ್ಗೆ ಮಾತನಾಡಿರುವುದು ಆಕಸ್ಮಿಕವಾಗಿ ಬಂದಿದ್ದು ನನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲು ಪೋಲೀಸರಿಗೆ ಒತ್ತಡ ಹೇರುತಿದ್ದದು ಕಂಡು ಬಂದದ್ದರಿಂದ ನಾನುಅಡಾಸ್ಪದ ಬಳಕೆ ಮಾಡಬೇಕಾಯಿತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎ ಪಿ ಎಂ ಸಿ  ಮಾಜಿ ಅದ್ಯಕ್ಷ ತಿ.ರಂಗರಾಜು ಬಿ ಜೆ ಪಿ ತಾಲ್ಲೂಕು ಅಧ್ಯಕ್ಷ ನಾಗೇಶ್ ನಾಗರಿಕ ಹಿತರಕ್ಷಣಾ ಸಮಿತಿಯ ರವೀಂದ್ರಕುಮಾರ್ ಸೇರಿದಂತೆ  ಅನೇಕರು ಇದ್ದರು.

 

Share This Article
error: Content is protected !!
";