ಮಣ್ಣಿನ ಮಡಿಲಲ್ಲಿ ಜೀವರಾಶಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ವಿಶ್ವ ಮಣ್ಣಿನ ದಿನವಾದ ಇಂದು ಮಣ್ಣಿನ ಮಹತ್ವದ ವಿಚಾರಗಳನ್ನು ನೆನೆದು ಭಕ್ತಿಯಿಂದ ನಮಿಸೋಣ. ಜೀವಕೋಶಕ್ಕೆ ಬೇಕಾದ ಎಲ್ಲಾ ಗುಣಾತ್ಮಕ ವಿಚಾರಗಳನ್ನು ಮಣ್ಣಿನಲ್ಲಿ ಭಗವಂತ ತುಂಬಿದ್ದಾನೆ.

ಮಣ್ಣು ನೈಸರ್ಗಿಕ ಸಂಪನ್ಮೂಲವಾಗಿದ್ದೆ. ಕೃಷಿ ಕಾಯಕದ ಸಸ್ಯರಾಶಿಗಳ ಆಹಾರ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳು ಮಣ್ಣಿನಲ್ಲಿ ಸಿಗುತ್ತದೆ.

ಎಂತಹದೇ ಕಲುಷಿತ ನೀರಿದ್ದರು ಮಣ್ಣಿನ ಗುಣಾತ್ಮಕ ಪದರಗಳು ನೀರನ್ನು ಶುದ್ದಿ ಮಾಡುತ್ತದೆ. ಭೂಗರ್ಭದಲ್ಲಿ ಉತ್ಪನ್ನವಾಗುವ ತಾಪಮಾನದ ಹೆಚ್ಚಳವನ್ನು ಅನಿಲದ ಮೂಲಕ ಹೊರಸೂಸುತ್ತದೆ.

 ಮಣ್ಣು ಹಾಗೂ ನೀರು ನೈಸರ್ಗಿಕ ವಸ್ತುಗಳು. ಪರಿಸರ ವ್ಯವಸ್ಥೆ ಮಾನವರ  ಯೋಗಕ್ಷೇಮವನ್ನು ಕಾಪಾಡುತ್ತದೆ. ಈ ವಿಚಾರವನ್ನು ಗಮನಿಸಿದ ಪ್ರತಿಯೋರ್ವ ಆತ್ಮೀಯರು ಈ ಸುದ್ದಿಯನ್ನು ಇತರರಿಗೆ ಪರಿಚಯಿಸಿ. ಇದು ಕಥೆಯಲ್ಲ ನೈಸರ್ಗಿಕ ಸಂಪನ್ಮೂಲಗಳ ಕೊಡುಗೆ.
ಲೇಖನ-ರಘು ಗೌಡ 9916101265

Share This Article
error: Content is protected !!
";