ಪರಿಷ್ಕರಣೆ ಮುಗಿದ ಕೂಡಲೆ ಬಿಪಿಎಲ್ ಕಾರ್ಡ್ ವಿತರಣೆ-ಆಹಾರ ಸಚಿವ ಮುನಿಯಪ್ಪ

News Desk

ಚಂದ್ರವಳ್ಳಿ ನ್ಯೂಸ್, ವಿಧಾನ ಪರಿಷತ್, ಬೆಂಗಳೂರು:
ವಿಧಾನ ಪರಿಷತ್ ನ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೆ. ಹಾಗೂ ಡಾ.ಯತೀಂದ್ರ ಎಸ್ ರವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ,

ಕಳೆದ ಸರ್ಕಾರಗಳ ಅವಧಿಯಿಂದಲೂ ಸಹ ಸಾರ್ವಜನಿಕರು ಪಡಿತರ ಚೀಟಿಗಾಗಿ ಸಲ್ಲಿಸಿದ್ದ ಹಲವಾರು ಅರ್ಜಿಗಳು ಪರಿಷ್ಕರಣೆ ಆಗದೆ ಹಾಗೆಯೇ ಉಳಿದಿದ್ದು ಅವುಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಹಂತ ಹಂತವಾಗಿ ಪರಿಷ್ಕರಣೆ ಮಾಡಲಾಗುತ್ತಿದ್ದು ಪರಿಷ್ಕರಣೆಯು ಹಂತಿಮ ಹಂತದಲ್ಲಿದೆ ಪರಿಷ್ಕರಣೆ ಕಾರ್ಯ ಮುಗಿದ ತಕ್ಷಣ ಅರ್ಹರಿಗೆ ಹೊಸ ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದರು .

- Advertisement - 

ನಮ್ಮ ರಾಜ್ಯವು ಆರ್ಥಿಕ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ರಾಜ್ಯ ಬಿಟ್ಟರೆ ನಂತರದ ಎರಡನೇ ರಾಜ್ಯವಾಗಿದ್ದು ನಾವು ಅಭಿವೃದ್ಧಿ ಹೋದಿರುವ ರಾಜ್ಯವಾಗಿದ್ದುನಮ್ಮ ರಾಜ್ಯದಲ್ಲಿ ಶೇ 75% ರಿಂದ 80 ರಷ್ಟು ಜನರು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದು ಇದು ಸಾದ್ಯವೆ ಎಂದರು.

ಕಳೆದ ಅವಧಿಯಲ್ಲಿ ನಾನು ಪರಿಷ್ಕರಣೆ ಕಾರ್ಯದ ಹಂತದಲ್ಲಿ ಸುಮಾರು 15 ಲಕ್ಷ ಕಾರ್ಡ್ ಳನ್ನು ಗುರುತಿಸಿದ್ದಾಗ ನಮ್ಮೆಲ್ಲಾ ಸದಸ್ಯರು ವಿರೋಧಿಸಿದ ಕಾರಣ ನಾವು ಕೈ ಬಿಡಲಾಯಿತು ಇದರಲ್ಲಿ ರಾಜಕೀಯ ಬೆರೆಸದೆ ಅರ್ಹರಿಗೆ ಮಾತ್ರ ನಾವು ಈ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಬೇಕು ಎಂದರು.

- Advertisement - 

ಪರಿಷ್ಕರಣೆ ಕಾರ್ಯ ಮುಗಿದ ತಕ್ಷಣ ಹೊಸ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದರು. ನಮ್ಮ ಸರ್ಕಾರ ಜನಪರವಾಗಿದ್ದು ಅರ್ಹ ಫಲಾನುಭವಿಗಳಿಗೆ ನಾವು ಕಾರ್ಡ್ ಗಳ ವಿತರಣೆ ಮಾಡುವ ಕುರಿತು ಕ್ರಮವಹಿಸಲಾಗುವುದು ಎಂದರು.

Share This Article
error: Content is protected !!
";