ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹಿರಿಯೂರು ತಾಲ್ಲೂಕಿನ 64 ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಸಹಕಾರಿ ಸಂಘಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆ.
ಪಶುಸಂಗೂಪನ ಇಲಾಖೆ ಇಲಾಖೆಯಿಂದ ದೂರೆಯುವ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ಜಿಲ್ಲಾ ನಿರ್ದೇಶಕ ಕೃಷಿಕ ಸಮಾಜ ಚಿತ್ರದುರ್ಗ ಹಾಗೂ ಕರಾಪಸಸ.ನಿ ನಿರ್ದೇಶಕ ಕೆ.ಜಗದೀಶ ಕಂದಿಕರೆ, ಮಾತನಾಡಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ರಾಷ್ಟೀಯ ಸುಸ್ಥಿರ ಅಭಿಯಾನ ಯೋಜನೆಯಲ್ಲಿ ಹಿರಿಯೂರು ತಾಲ್ಲೂಕಿನ 1000 ರೈತರಿಗೆ 2.50ಕೋಟಿ ಸಹಾಯ ಧನವನ್ನು ಮುಂಜೂರು ಮಾಡಿಸಿದ್ದಾರೆ ಎಂದು ತಿಳಿಸಿದರು.
ರೈತರು ಇದರ ಸದುಪಯೋಗಪಡಿಸಿಕೊಂಡು ಅರ್ಹ ಮತ್ತು ಆಸಕ್ತ ರೈತರಿಗೆ ನೈಜ ಫಲಾಭವಿಗಳಿಗೆ ತಲುಪಿಸಬೇಕು ಹಾಗೂ ಎಲ್ಲಾ ಸಹಕಾರಿ ಸಂಘಗಗಳ ಪದಾಧಿಕಾರಿಗಳು ಶ್ರಮಿಸಬೇಕು ಮತ್ತು ಆಸಕ್ತ ಸಹಕಾರಿಗಳು ಛಾಪಾಕಾಗದ ವಿತರಣೆ, ಆಹಾರ ಸಂಸ್ಕರಣ ಕೇಂದ್ರಗಳಿಗೆ, ಗೊಬ್ಬರ ಬೀಜ ಕೇ.ದ್ರಗಳನ್ನ ತೆರೆಯಲು ಅನುಮತಿಪಡೆದು ಸಹಾಯಧನ ಪಡೆಯಲು ಮತ್ತು ಸಹಕಾರಿ ರೈತರಿಗೆ ಹಾವು ಕಡಿತ ಆತ್ಮಹತ್ಯೆ ಆಕಸ್ಮಿಕ ಮರಣಗಳಿಗೆ ಸರ್ಕಾರದ ಸೌಲಭ್ಯ ಪಡೆದು ಕೊಳ್ಳುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಸಹಕಾರಿಗಳ ಒಕ್ಕೂಟ ರಚನೆ ಬಗ್ಗೆ ಹಾಗೂ ಸೌಲಭ್ಯ ಪಡೆದುಕೊಳ್ಳಲು ಮತ್ತು ವ್ಯಾಪ್ತಿಯ ಎಲ್ಲಾ ರೈತರಿಗೆ ಕಂದಿಕೆರೆ ಜಗದೀಶ್ ತಿಳಿಸಿದರು.
ಉಪನಿರ್ದೇಶಕ ಕುಮಾರ್, ಉಪನಿರ್ದೇಶಕ ತಿಪ್ಪೇಸ್ವಾಮಿ, ವೈದ್ಯಾಧಿಕಾರಿ ನಾಗರಾಜ, ಕೃಷಿ ಅಧಿಕಾರಿ ಕಿರಣ್ ಮತ್ತು ಶಿಮುಲ್ ಒಕ್ಕೂಟದ ವಿಸ್ತರಣಾಧಿಕಾರಿ ಕೃಷ್ಣಕುಮಾರ್ ರವರುಗಳು ಭಾಗವಹಿಸಿದ್ದರು.

