ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜನವರಿ-23ರಂದು ಮುಖಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ವಿ ವಿ ಪುರದ ಸಮೀಪ ಇರುವ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಲಾಗಿದ್ದು ವಿವಿ ಸಾಗರ ಜಲಾಶಯ 3ನೇ ಬಾರಿಗೆ ಭರ್ತಿಯಾಗಿ ಕೋಡಿ ಹರಿದಿರುವ ಹಿನ್ನೆಲೆಯಲ್ಲಿ
ಬಾಗಿನ ಅರ್ಪಿಸುವ ಸಲುವಾಗಿ ಆಗಮಿಸುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಸುಗಮ ಸಂಚಾರ ಸಲುವಾಗಿ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
1) ಹೊಸದುರ್ಗದಿಂದ – ಹಿರಿಯೂರು ಕಡೆಗೆ ಹೋಗುವವರು (ವಿ ವಿ ಪುರ ಕಡೆಗೆ ಬರದೇ ) ತಳವಾರಹಟ್ಟಿ ಮಾರ್ಗವಾಗಿ ಭರಮಗಿರಿ ಕ್ರಾಸ್ ಮುಖಾಂತರ ರಸ್ತೆಯನ್ನು ಬಳಸಿ ಹಿರಿಯೂರು ಕಡೆಗೆ ಹೋಗುವುದು.
2) ಹಿರಿಯೂರು ಕಡೆಯಿಂದ – ಹೊಸದುರ್ಗ ಕ್ಕೆ ಹೋಗುವವರು ವಿ. ವಿ ಪುರ ಕಡೆಗೆ ಹೋಗದೆ ನೇರವಾಗಿ ತಳವಾರಹಟ್ಟಿ ಮಾರ್ಗವಾಗಿ ಹೊಸದುರ್ಗ ಕಡೆಗೆ ಹೋಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.