ಚಡ್ಡಿ ಗ್ಯಾಂಗ್ ಕಳ್ಳರ ರಾಜಾರೋಷ ಓಡಾಟ: ಭಯಬೀತರಾದ ನಾಗರೀಕರು

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಚಿತ್ರದುರ್ಗ ರಸ್ತೆಯ ತಿಪ್ಪೇಸ್ವಾಮಿ ಮತ್ತು ಜಾಫರ್‌ಶರೀಪ್ ಲೇಔಟ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನಜಾವ ಬೆಳಗ್ಗೆ ೨ರ ಸಮಯದಲ್ಲಿ ಆರು ಜನ ಕಳ್ಳರ ಗ್ಯಾಂಗೊಂದು ಮಂಕಿಕ್ಯಾಪ್
, ಜರ್ಕಿನ್, ಕೈಗ್ಲೌಸ್, ಚಡ್ಡಿ, ಕೈಯಲ್ಲಿ ರಾಡ್ ಹಾಗೂ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಮನೆಗಳ ಗೇಟ್ ಹಾಗೂ ಬಾಗಿಲಿಗೆ ಬ್ಯಾಟರಿ ಬಿಟ್ಟು ಮನೆಗಳಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ಧಾರೆ. ವಿಶೇಷವೆಂದರೆ ಕಳ್ಳತನಕ್ಕೆ ಆಗಮಿಸಿದ್ದ ಆರೂ ಜನರು ಯುವಕರಾಗಿದ್ದು ರಾಜಾರೋಷವಾಗಿ ರಸ್ತೆತುಂಬಾ ಓಡಾಡಿದ್ದಾರೆ.

- Advertisement - 

ತಿಪ್ಫೇಸ್ವಾಮಿ ಲೇಔಟ್‌ನ ನಿವಾಸಿ, ವಕೀಲ ಜಯಶೀಲರೆಡ್ಡಿ ಊರಿಗೆ ತೆರಳಿದ್ದು ಅವರ ತಾಯಿ ಮಾತ್ರ ಮನೆಯ ಮೇಲ್ಭಾಗದಲ್ಲಿ ಮಲಗಿದ್ದರು. ಇವರ ಮನೆಯ ಇಂಟರ್‌ಲಾಕ್ ಮುರಿದು ಒಳಗೆ ಪ್ರವೇಶಿಸಿ ಕಳ್ಳರು ಮನೆಯ ಎಲ್ಲೆಡೆ ಹುಡುಕಾಡಿ ಕೈಗೆ ಸಿಕ್ಕ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ಧಾರೆ.

- Advertisement - 

ಚಡ್ಡಿಗ್ಯಾಂಗ್ ಓಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸಾರ್ವಜನಿಕರು ಚಡ್ಡಿಗ್ಯಾಂಗ್ ಕಂಡು ಭಯಭೀತರಾಗಿದ್ಧಾರೆ. ಕೈಯಲ್ಲಿ ರಾಡ್ ಹಿಡಿದು ನಿರ್ಭಯದಿಂದ ಓಡಾಡುವರನ್ನು ಕಂಡರೆ ಇವರಿಗೆ ಯಾವುದೇ ಭಯವಿದ್ದಂತೆ ಕಾಣುವುದಿಲ್ಲ. ಬೆಳಗ್ಗೆ ವಕೀಲ ಜಯಶೀಲರೆಡ್ಡಿಯವರ ಗೇಟ್ ತೆರೆದಿದ್ದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಡಿವೈಎಸ್ಪಿ ಟಿ.ಬಿ.ರಾಜಣ್ಣ, ಠಾಣಾ ಇನ್ಸ್‌ಪೆಕ್ಟರ್ ಕೆ.ಕುಮಾರ್ ಮತ್ತು ತಂಡ ಕೂಡಲೇ ಸ್ಥಳಕ್ಕೆ ಗಮಿಸಿ ಪರಿಶೀಲನೆ ನಡೆಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಓಡಾಟನಡೆಸಿ ಯಾವುದಾರೂ ಕುರುಹುಸಿಗುವುದಾಗಿ ಪರಿಶೀಲಿಸಿದರು. ಬೆಳರಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಕಳ್ಳರ ಚಲನವಲನದ ಬಗ್ಗೆ ಮಾಹಿತಿ ಪಡೆದಿದ್ಧಾರೆ.

ಡಿವೈಎಸ್ಪಿ ರಾಜಣ್ಣ ಈ ಬಗ್ಗೆ ಮಾಹಿತಿ ನೀಡಿ, ನಿಮ್ಮಸುತ್ತಮುತ್ತಲ ಯಾರಾದರೂ ಓಡಾಡಿದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಚಡ್ಡಿಗ್ಯಾಂಗ್ ಬಂಧನಕ್ಕೆ ಪೊಲೀಸರು ಕ್ರಮಕೈಗೊಳ್ಳಿದ್ದು ಸಾರ್ವಜನಿಕರು ಯಾರೂ ಭಯಭೀತರಾಗಬಾರದು. ಚಡ್ಡಿಗ್ಯಾಂಗ್ ಕಾರ್ಯಚರಣೆಯ ಬಗ್ಗೆ ಈಗಾಗಲೇ ಮತ್ತಷ್ಟು ಮಾಹಿತಿಯನ್ನು ಪಡೆಯಲಿದ್ದು ಅವರನ್ನು ಬಂಧಿಸುವ ಪ್ರಯತ್ನಗಳು ಮುಂದುವರೆದಿವೆ. ಸಾರ್ವಜನಿಕರು ಸಹ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದರು.

- Advertisement - 

 

Share This Article
error: Content is protected !!
";