ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಎರಡು ವರ್ಷದಲ್ಲಿ ಕೊಟ್ಟಿದ್ದು ಏನೂ ಇಲ್ಲ, ಬರೀ ಸುಳ್ಳು ಹೇಳಿದ್ದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ಸಾಧನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.
10 ಕೆಜಿ ಅಕ್ಕಿ ಬೇಕೋ ಬೇಡ್ವೋ ಅಂತ ಬಣ್ಣ ಬಣ್ಣದ ಕಾಗೆ ಹಾರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಹತ್ತು ಕೆಜಿ ಅಕ್ಕಿನೂ ಕೊಡದೆ, ಹಣವೂ ನೀಡದೆ ಕನ್ನಡಿಗರ ಕೈಗೆ ಚೊಂಬು ಕೊಟ್ಟಿದೆ ಎಂದು ಅಶೋಕ್ ಆರೋಪಿಸಿದರು.
ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರೇ, ಅಕ್ಕಿ ಸಾಗಿಸುವ ಲಾರಿ ಮಾಲೀಕರ ಬಿಲ್ ಪಾವತಿ ಮಾಡಲು ದುಡ್ಡಿಲ್ಲ. ಸಮಯಕ್ಕೆ ಸರಿಯಾಗಿ ದುಡ್ಡು ಕಟ್ಟಿ FCI ಯಿಂದ ಅಕ್ಕಿ ಖರೀದಿ ಮಾಡಲು ದುಡ್ಡಿಲ್ಲ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕಮಿಷನ್ ಕೊಡಲೂ ದುಡ್ಡಿಲ್ಲ ಎಂದು ಅವರು ದೂರಿದರು.
ಸಂಪೂರ್ಣವಾಗಿ ದಿವಾಳಿ ಆಗಿರುವ ನಿಮ್ಮ ಪಾಪರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದಲ್ಲೂ ದುಡ್ಡಿಲ್ಲ, ಬಡವರಿಗೆ ಅಕ್ಕಿಯೂ ಸಿಗುತ್ತಿಲ್ಲ ಎಂದು ಅಶೋಕ್ ರೇಗಾಡಿದ್ದಾರೆ.

