ಬೂಕರ್ ಪ್ರಶಸ್ತಿ ಪುರಸ್ಕೃತ ಬಾನುಮುಷ್ತಾಕ್ ಗೆ ತರಳಬಾಳು ಶ್ರೀಗಳ ಅಭಿನಂದನೆ

News Desk

ಚಂದ್ರವಳ್ಳಿ ನ್ಯೂಸ್, ಸಿರಿಗೆರೆ:
 ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಭಾಜನರಾಗಿರುವ ಕನ್ನಡದ ಲೇಖಕಿ ಬಾನುಮುಷ್ತಾಕ್ ಅವರನ್ನು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿನಂದಿಸಿದ್ದಾರೆ.

- Advertisement - 

ಹೃದಯದೀಪ” (Heart Lamp) ಕಥಾ ಸಂಕಲನದ ಅನುವಾದಕ್ಕೆ ಈ ಪ್ರಶಸ್ತಿ ಲಭಿಸಿರುವುದು ಕನ್ನಡ ಸಣ್ಣಕಥೆಗಳ ಪ್ರಕಾರಕ್ಕೆ ಸಂದ ಗೌರವವಾಗಿದೆ. ಲೇಖಕಿ ಬಾನುಮುಷ್ತಾಕ್ ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ, ರೈತರ ಪರ ಧ್ವನಿಯಾಗಿದ್ದಾರೆ.ಮಠದ ವಾರ್ಷಿಕ ಕಾರ್ಯಕ್ರಮವಾದ ತರಳಬಾಳು ಹುಣ್ಣಿಮೆ ಮಹೋತ್ಸವವು 2001ರಲ್ಲಿ ಅರಸೀಕೆರೆ ಪಟ್ಟಣದಲ್ಲಿ ಜರುಗಿದಾಗ “ಮಹಿಳೆ ಮತ್ತು ಅಸ್ತಿತ್ವ” ಕುರಿತು ಉಪನ್ಯಾಸ ನೀಡಿದ್ದರು.

- Advertisement - 

1990ರಲ್ಲಿ ಸಿರಿಗೆರೆಯಲ್ಲಿ ಜರುಗಿದ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಹ ಭಾಗವಹಿಸಿರುವುದನ್ನು ಶ್ರೀಗಳು ಸ್ಮರಿಸಿಕೊಂಡರು. 1990 ಡಿಸೆಂಬರ್ 8,9,10 ರಂದು ಮೂರು ದಿನಗಳ ಕಾಲ ಸಿರಿಗೆರೆಯಲ್ಲಿ ಸಾಹಿತ್ಯ ಸಮ್ಮೇಳನ. ಅದು ಜಿಲ್ಲಾ ಸಮ್ಮೇಳನವಾಗಿದ್ದರೂ ಅಖಿಲ ಭಾರತ ಸಮ್ಮೇಳನಕ್ಕೇನೂ ಕಡಿಮೆ ಇರಲಿಲ್ಲ. ಆ ಸಮ್ಮೇಳನದಲ್ಲಿ ಭಾಗವಹಿಸಿದ್ದವರ ಪಟ್ಟಿ ಕೇಳಿದರೆ ಅಚ್ಚರಿ ಮೂಡಿಸುತ್ತದೆ. ಡಾ. ಜಿ ಎಸ್ ಶಿವರುದ್ರಪ್ಪ, ಪ್ರೊ. ಸಿದ್ಧಲಿಂಗಯ್ಯ, ಡಾ. ಎಂ.ಚಿದಾನಂದ ಮೂರ್ತಿ, ಡಾ. ಗಿರಡ್ಡಿ ಗೋವಿಂದ ರಾಜು, ಡಾ. ಓ ಎಲ್ ಎನ್, ಡಾ. ಬಸವರಾಜ್ ಕಲ್ಗುಡಿ, ಡಿ ಎಸ್ ನಾಗಭೂಷಣ, ಎಚ್ ಎಸ್ ರಾಘವೇಂದ್ರ ರಾವ್, ಟಿ ಪಿ ಅಶೋಕ್, ಡಾ. ಎಚ್.ಎಸ್.ವಿ, ಡಾ.ರಾಜಶೇಖರಪ್ಪ, ಡಾ.ತೆಲಗಾವಿ, ಒಬ್ಬರೇ ಇಬ್ಬರೇ ಹೆಸರಾಂತ ಸಾಹಿತಿಗಳು, ಕವಿಗಳು, ವಿಮರ್ಶಕರ ದೊಡ್ಡ ದಂಡೇ ಅಲ್ಲಿಗೆ ಆಗಮಿಸಿತ್ತು.

ಈಗ ಬೂಕರ್ ಪ್ರಶಸ್ತಿಯಿಂದ ಭಾರಿ ಸುದ್ದಿಯಲ್ಲಿರುವ ಬಾನುಮುಷ್ತಾಕ್ ಸಹ ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಅವರ ಮೊದಲ ಕಥಾ ಸಂಕಲನ ಹೆಜ್ಜೆ ಮೂಡಿದ ಹಾದಿಕೃತಿ ಲೋಕಾರ್ಪಣೆಗೊಂಡದ್ದು ಇದೇ ವೇದಿಕೆಯಲ್ಲಿ. ನ್ಯಾಯವಾದಿಯಾಗಿ, ಪತ್ರಕರ್ತೆಯಾಗಿ, ಸಾಮಾಜಿಕ ಹೋರಾಟಗರ್ತಿಯಾಗಿ, ಅನ್ನದಾತನ ಬೆನ್ನೆಲುಬಾಗಿರುವ ಬಾನುಮುಷ್ತಾಕ್ ತಮ್ಮ ಸೃಜನಶೀಲ ಶಕ್ತಿಯಿಂದ ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದಾರೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ. ಹಾಗೆಯೇ ವಚನ ಸಾಹಿತ್ಯದ ಮೂಲಕ ಅಸ್ಮಿತೆಯನ್ನು ಹೊಂದಿರುವ ಕನ್ನಡ ಸಾಹಿತ್ಯ. ರಾಜಕೀಯ ಕಾರಣಕ್ಕಾದರೂ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆದಿರುವ ಕನ್ನಡ. “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್” ಎನಿಸಿಕೊಂಡ ಅಭಿಜಾತ ಪ್ರತಿಭೆಗಳ ನಾಡು ಈ ಕರ್ನಾಟಕ.

- Advertisement - 

ಈ ನೆಲದ ಒಡಲಲ್ಲಿ ಆರ್ದ್ರಗೊಂಡ ಹೃದಯಗಳ ಅಭಿವ್ಯಕ್ತಿ ಕಾವ್ಯವಾಗಿ, ಕಥೆಗಳಾಗಿ, ನಾಟಕಗಳಾಗಿ, ಕಾದಂಬರಿಗಳಾಗಿ ಹೊರಹೊಮ್ಮಿವೆ. ಅದಕ್ಕೆ ಜ್ಞಾನಪೀಠ, ಸರಸ್ವತಿ ಸಮ್ಮಾನ ಗಳು ಕನ್ನಡ ದೇವಿಯ ಮಕುಟದಲ್ಲಿ ಶೋಭಾಯಮಾನವಾಗಿವೆ. ಅಂತಹ ಮತ್ತೊಂದು ಶೋಭಾಯಮಾನಕ್ಕೆ ಕಾರಣರಾದವರು ಕನ್ನಡಕ್ಕೆ ಜಾಗತಿಕ ಮನ್ನಣೆಗೆ ಕಾರಣರಾದವರು ಬಾನು ಮುಷ್ತಾಕ್ ಅವರು ಏಳು ಕೋಟಿ ಕನ್ನಡಿಗರ ಎದೆಯಲ್ಲಿ ಕನ್ನಡದ ಡಿಂಡಿಮ ನುಡಿಸಿ, ಎಚ್ಚರಗೊಳಿಸಿರು. ಕನ್ನಡ ಹೃದಯದ ಭಾಷೆ ಎಂಬುದನ್ನು ಸಾಬೀತು ಪಡಿಸಿವರು.

Share This Article
error: Content is protected !!
";