ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಮಾಳಪ್ಪನಹಟ್ಟಿ ವಲಯದ ಸೊಲ್ಲಾಪುರ ಗ್ರಾಮದ ವೃದ್ದೆ ನಾಗಮ್ಮನವರಿಗೆ ಮಂಜೂರಾಗಿರುವ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಯೋಜನಾಧಿಕಾರಿ ರವಿಚಂದ್ರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ ವಾತ್ಸಲ್ಯ ಯೋಜನೆಯಡಿ ವಾತ್ಸಲ್ಯ ಮಿಕ್ಸ್, ಬಟ್ಟೆ, ಪಾತ್ರೆ ಕಿಟ್ ಒಳಗೊಂಡಂತೆ ತಿಂಗಳಿಗೆ ನೀಡಲಾಗುವ ಒಂದು ಸಾವಿರ ರೂ.ಮಾಶಾಸನ ವೃದ್ದಾಪ್ಯದಲ್ಲಿ ನಿರ್ಗತಿಕರಿಗೆ ನೆರವಾಗಲಿದೆ.
ಸೂರು ಕಲ್ಪಿಸುವುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರ ಮಹದಾಸೆಯಾಗಿರುವುದರಿಂದ ನಾಗಮ್ಮನಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳ, ವಲಯ ಮೇಲ್ವಿಚಾರಕ ಮೋಹನ್, ಜ್ಞಾನಿವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಎಸ್.ಬಾಗೋಡಿ, ಮೇಸ್ತ್ರಿ ವಿಶ್ವನಾಥ್, ಸೇವಾಪ್ರತಿನಿಧಿಗಳು ಈ ಸಂದರ್ಭದಲ್ಲಿದ್ದರು.