ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಐಯುಡಿಪಿ ಲೇ ಔಟ್ ಲ್ಲಿ ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಸ್ತುತ ಸಮುದಾಯದ ಭಾಗವಾಗಿರುವ ಪೋಷಕರು ಹಾಗೂ
ಶಿಕ್ಷಕರು ಹಾಗೂ ಜನಪ್ರತಿನಿಧಿಗಳು ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತರು ಎಲ್ಲಾರೂ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಸಹಕರಿಸಿ ಎಂದು ಆಶ್ರಿತ ಸಂಸ್ಥೆಯ ಚಿತ್ರದುರ್ಗ ತಾಲೂಕ್ ಸಂಯೋಜಕ ಹರ್ಷವರ್ಧನ ವಿದ್ಯಾರ್ಥಿಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು
ಹಾಗೆಯೆ ಮುಖ್ಯ ಶಿಕ್ಷಕರಾದ ಗೌಸ್ ಫಯಾಜ್ ಮಾತನಾಡಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ದತಿ ಹೋಗಲಾಡಿಸಲು ನಾವು ಕೈಜೋಡಿಸಿ ಅಂತಹ ಮಕ್ಕಳು ಕಂಡುಬಂದರೆ ನಾವೆಲ್ಲರೂ ಒಟ್ಟಾಗಿ ಅಂತಹ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಿ ಪ್ರಬುದ್ಧ ಸಮಾಜಕ್ಕೆ ಕೈ ಜೋಡಿಸೋಣ ಎಂದು ಹೇಳಿದರು
ಹಾಗೆಯೇ ಸಹ ಶಿಕ್ಷಕರಾದ ಡಾ.ತಿಪ್ಪೇಸ್ವಾಮಿ ಮಾತಾನಾಡಿ ವಿದ್ಯಾರ್ಥಿಗಳ ಜೊತೆಗೆ ಪೋಷಕರಿಗೂ ಕೂಡ ಅರಿವು ಕಾರ್ಯಕ್ರಮ ಆಯೋಜಿಸಬೇಕು ಇದರಿಂದ ಮನೆ ಹಾಗೂ ಸಮಾಜ ಒಂದೊಳ್ಳೆ ಮಾರ್ಗದ ಕಡೆ ಬರಲು ಸಾದ್ಯವಾಗುವುದು ಖಂಡಿತವಾಗಿಯೂ ಇಂತಹ ಅರಿವು ಕಾರ್ಯಕ್ರಮಗಳಿಂದ ಬದಲಾವಣೆಯ ಕಡೆ ಸಮಾಜ ನಿರ್ಮಾಣ ಆಗುತ್ತದೆ ಎಂದು ತಿಳಿಸದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಅನುಸೂಯಮ್ಮ ,ಉಮ್ಮೇಸಲ್ಮಾ ,ಅನಿತಕುಮಾರಿ, ಅಕ್ಕಮಹಾದೇವಿ ಪ್ರಸನ್ನ ಹಾಗೂ ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.