ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ

News Desk

ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
ಚಂದ್ರವಳ್ಳಿ ನ್ಯೂಸ್,
ದೊಡ್ಡಬಳ್ಳಾಪುರ:
ತಾಲ್ಲೂಕಿನ
ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ನೆಲ್ಲುಗುದಿಗೆ ಗ್ರಾಮದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಶ್ರೀ ಆಂಜಿನೇಯ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಒಂದು ಲಕ್ಷ ರೂಗಳನ್ನು ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಡಿ.ಡಿ ವಿತರಣೆ ಮಾಡಿದರು.

- Advertisement - 

ಅವರು ಮಾತನಾಡಿ ಗ್ರಾಮದ ಅಭಿವೃದ್ದಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಗಳಾದ ಶ್ರೀ ವೀರೇಂದ್ರ ಹೆಗಡೆಯವರು ಖಾಸಗಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಜೋತೆ ಬಡ್ಡಿ ಸೇರಿ ಒಂದಕ್ಕೆ ಎರಡ ರಷ್ಠು ಸಾಲ ಹೆಚ್ಚಳವಾಗಿ ತೀರಿಸಲು ಸಾಧ್ಯವಾಗಿದೆ ಪ್ರಾಣ ಹಾನಿ ಮಾಡಿಕೊಳ್ಳುವ ಪ್ರಕರಣಗಳು ಕಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಗ್ರಾಮೀಣ ಜನರ ಆಶ್ರಯವಾಗಿ ದ್ದಾರೆ.

- Advertisement - 

ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮನೆ ಇಲ್ಲದವರಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಅಪಘಾತದಲ್ಲಿ ತೊಂದರೆಯಾದರೆ ಕ್ರಿಟಿಕಲ್ ಫಂಡ್ ಸಮುದಾಯ ಯೋಜನೆಯಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ ಅಂಗನವಾಡಿ ಕಟ್ಟಡ. ಹಾಲಿ ಡೇರಿ. ಟೈಲರಿಂಗ್ ತರಭೇತಿ ವಾತ್ಸಲ್ಯ ಯೋಜನೆ. ಕೃಷಿಗಾಗಿ ಅನುದಾನ. ಕೆರೆಗಳ ಪುನಶ್ಚೇತನ. ಶುದ್ದ ನೀರಿ ಘಟಕ. ಬೀಮಾ ಜ್ಯೋತಿ ಶ್ರೀ ಶಕ್ತಿ ಸಂಘಗಳಿಗೆ ಸಾಲದ ವ್ಯವಸ್ಥೆ ಹೀಗೆ ಹತ್ತಾರು ಯೋಜನೆಗಳನ್ನು ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿ ದಿನೇಶ್ ಪ್ರಾಸ್ತಾವಿಕ ಮಾಹಿತಿ ನೀಡಿದರು.

- Advertisement - 

ಈ ಕಾರ್ಯಕ್ರಮದಲ್ಲಿ. ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಗೌರವಾಧ್ಯಕ್ಷ ಪಿಳ್ಳಪ್ಪ ಕಾರ್ಯನಿರತ ಪತ್ರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ನೆಲ್ಲುಗುದಿಗೆ ಚಂದ್ರು
ದೇವಾಲಯ ಸಮಿತಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮುನಿರಾಜು, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಮಿತಿ ಖಜಾಂಚಿ ಮಂಜುನಾಥ್,ನಿರ್ದೇಶಕರಾದ ಆನಂದ್
ಆರ್ಚಕ ರಾಮಾನುಜ ಚಾರ್ಯ

ಗೆದ್ದಲಹಳ್ಳಿ ಒಕ್ಕೂಟದ ಅಧ್ಯಕ್ಷರಾದ ಧನಂಜಯ್ ,
ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ಒಕ್ಕೂಟದ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ಟಿ ಎಂ ಸಿದ್ದಪ್ಪ ಕೆ ಸಿದ್ದಪ್ಪ ಎಂ ಸಿದ್ದಪ ಬೀರಪ್ಪ ಗಂಗಾಧರ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು ಸೇವಾ ಪ್ರತಿನಿಧಿಗಳಾದ ರಿಜ್ವಾನ್,ಭಾರತಿ. ವಿ ಎಲ್ ಐ ಇ ಮಂಜುಳ, ಶೃತಿ ಇದ್ದರು.

Share This Article
error: Content is protected !!
";