ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಜಿಲ್ಲಾ ಚಿತ್ರದುರ್ಗ ವತಿಯಿಂದ ಭಾನುವಾರ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ ಶೇಖರ್ ರವರ 52 ನೇ ಹುಟ್ಟು ಹಬ್ಬದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣಾ ಮಾಡಲಾಯಿತು.
ಜಿಲ್ಲಾಧ್ಯಕ್ಷ ಬಿಎಸ್. ಮಂಜಣ್ಣ ಅಧ್ಯಕ್ಷತೆ ಮಾತನಾಡಿ 1956 ರಲ್ಲಿ ಮೈಸೂರು ರಾಜ್ಯ ಕರ್ನಾಟಕ ಎಂದು ಏಕೀಕರಣ ಆದ ಸಂದರ್ಭದಲ್ಲಿ 1973ರಲ್ಲಿ ಎಸ್ ನಿಜಲಿಂಗಪ್ಪನವರು ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದರು.
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ನಾಡು ನುಡಿ ನೆಲ ಜಲ ಗಡಿ ಭಾಷೆ ಸಂಸ್ಕೃತಿ ಉಳಿಸಿ ಬೆಳೆಸಲು ಸದಾ ಮುಂದೆ ಇದ್ದು ಈ ಸೇನಾ ಸಮಿತಿ ಜಿಲ್ಲೆಯ ಗಡಿ ಭಾಗದ ರೈತ ಪರ ಕಾರ್ಮಿಕ ಪರ ಕನ್ನಡ ಪರ ಶಿಕ್ಷಣ ಪರ ದಲಿತರ ಪರ ಹಿಂದುಳಿದ ವರ್ಗಗಳ ಪರ ಆರೋಗ್ಯ ಪರ ಸಮಾಜ ಸರಕಾರದ ದಿಂದ ವಂಚಿತರಾದ ಪರ ಸದ ನಿಲ್ಲಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇನಾ ಸಮಿತಿ ಪದಾಧಿಕಾರಿಗಳಾದ ನಾಗಸಮುದ್ರ ಮರಿಸ್ವಾಮಿ, ಚಿಕ್ಕರಹಳ್ಳಿ ಉಮೇಶ್, ತಿಮಲಾಪುರ ಹನುಮಂತಪ್ಪ, ಕಕೆಪುರ ಜಿಬಿ.ಪರಮೇಶ್, ಮೂರ್ತಿ, ಬಸವರೆಡ್ಡಿ, ದೇವಸಮುದ್ರ ಮಾರಣ್ಣ, ಬಟ್ರಹಳ್ಳಿ ಶೇಖರ್, ಆಸ್ಪತ್ರೆಗೆ ಸಿಬ್ಬಂದಿಗಳು ಇತರರು ಹಾಜರಿದ್ದರು.