ಇಟಲಿ ಮಾತೆಗೆ 2 ಕೋಟಿ ಕೊಟ್ಟು ಅಧ್ಯಕ್ಷಗಿರಿಯಲ್ಲಿರುವ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಟಲಿ ಮಾತೆಗೆ
2 ಕೋಟಿ ರೂ. ದೇಣಿಗೆ ಕೊಟ್ಟು ಅಧ್ಯಕ್ಷಗಿರಿ ಅನುಭವಿಸುತ್ತಿರುವ  ಡಿ.ಕೆ ಶಿವಕುಮಾರ್ ಬಂಡವಾಳ ಮತ್ತೊಮ್ಮೆ ಬೆಳಕಿಗೆ ಬಂದಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

- Advertisement - 

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಾಯಕತ್ವದ “ಯಂಗ್‌ ಇಂಡಿಯಾ ಕಂಪನಿ”ಗೆ ಅಪೂರ್ವ ಸಹೋದರರು 50 ಲಕ್ಷ ರೂ. ಕಪ್ಪ ಕೊಟ್ಟಿದ್ದಾರೆ. 2022ರಲ್ಲಿಯೂ ಡಿಕೆಶಿ ಮಾಲೀಕತ್ವದ “ನ್ಯಾಷನಲ್‌ ಎಜುಕೇಷನ್‌ ಟ್ರಸ್ಟ್‌”ನಿಂದಲೂ 2 ಕೋಟಿ ರೂ. ಸಂದಾಯಮಾಡಿರುವುದನ್ನು ಇಡಿ ಬಹಿರಂಗ ಪಡಿಸಿದೆ ಎಂದು ಜೆಡಿಎಸ್ ಆರೋಪಿಸಿದೆ.   

- Advertisement - 

ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸೂತ್ರಧಾರಿಗಳಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಇಡಿ(ED) ಈಗಾಗಲೇ ಚಾರ್ಜ್‌ ಶೀಟ್‌ ಸಲ್ಲಿಸಿದೆ. ಅಪೂರ್ವ ಸಹೋದರರ ಹೆಸರ ಕೂಡ ಇಡಿ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖವಾಗಿದೆ ಎಂದು ಜೆಡಿಎಸ್ ತಿಳಿಸಿದೆ.

ಕಾಂಗ್ರೆಸ್‌ ಪಕ್ಷದ ಪ್ರತಿಯೊಂದು ಹುದ್ದೆಗಳಿಗೂ ಹಾಗೂ ಚುನಾವಣೆಗಳ ಸಮಯದಲ್ಲಿ ಆಕಾಂಕ್ಷಿಗಳಿಗೆ ರೇಟ್‌ ಫಿಕ್ಸ್‌ ಮಾಡಿ ಕಲೆಕ್ಷನ್‌ ಮಾಡುತ್ತಿರುವ ಗಿರಾಕಿ, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಚಾಚು ತಪ್ಪದೇ ಹೈಕಮಾಂಡ್‌ಗೆ ಕಾಲ ಕಾಲಕ್ಕೆ ಕಪ್ಪ ಕಾಣಿಕೆ ಸಲ್ಲಿಸುತ್ತಾ, ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. 

- Advertisement - 

 

 

Share This Article
error: Content is protected !!
";