ಪಟಾಕಿ ಹೊಡಿಬೇಡಿ, ಡಿಜೆ ಬಳಸಬೇಡಿ ಅನ್ನೋದು ಸರ್ಕಾರದ ತಾರತಮ್ಯದ ನಿಲುವು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದೇನೆ.
ಗಣೇಶ ಅಂದ್ರೆ ಸಕಲ ವಿಘ್ನಗಳ ನಿವಾರಕ. ದೇಶಕ್ಕೆ ಬರುವ ಎಲ್ಲಾ ವಿಘ್ನಗಳನ್ನೂ ನಿವಾರಿಸಲಿ ಎಂದು ಗಣೇಶನಲ್ಲಿ ಪ್ರಾರ್ಥಿಸಿರುವೆ ಎಂದು ಮಾಜಿ ಸಚಿವ ಸಿ.ಟಿ ರವಿ ಅವರು ತಿಳಿಸಿದರು.
ಚಿತ್ರದುರ್ಗದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ,  ಹಿಂದೂ ಸಮಾಜ ಒಗ್ಗೂಡಿಲು ತಿಲಕರು ಗಣೇಶ ಉತ್ಸವ ಮಾಡಿದ್ರು.
ಹಿಂದೂ ಸಮಾಜ ಜಾತಿಯತೆ, ಅಸ್ಪೃಷ್ಯತೆಯಿಂದ ಮುಕ್ತವಾಗಬೇಕು. ಅಸ್ಪೃಶ್ಯತೆ ಅನ್ನೋದೂ ಹಿಂದೂ ಸಮಾಜಕ್ಕೆ ಅಂಟಿರುವ ಒಳಗಿನ ಖಾಯಿಲೆ. ಇದನ್ನ ನಿವಾರಿಸಿಕೊಂಡ್ರೆ, ಮತಾಂತರ, ಲವ್ ಜಿಹಾದ್ ಸಮಸ್ಯೆ ಹೆದರಿಸಲು ಸುಲಭ ಎಂದು ರವಿ ಅವರು ತಿಳಿಸಿದರು.

ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಬಂಧುತ್ವದ ಭಾವನೆ ಗಟ್ಟಿಗೊಳಿಸಬೇಕು. ಮನೆಯಲ್ಲಿ, ಮನದಲ್ಲಿ ಅಸ್ಪೃಷ್ಯತೆಗೆ ಜಾಗ ಕೊಡಬಾರದು. ಹಿಂದೂ ಆಚರಣೆಗಳು ಬಂದಾಗ ಪಟಾಕಿ ಹೊಡಿಬೇಡಿ, ಡಿಜೆ ಬಳಸಬೇಡಿ. ಅನ್ನೋದು ತಾರತಮ್ಯದ ನಿಲುವು ಅನ್ಸತ್ತೆ. ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಮನವಿ ಮಾಡ್ತಿನಿ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನಾವು ಯಾರಿಗೂ ಕಲ್ಲು ಹೊಡಿಯೊರು, ಪೆಟ್ರೋಲ್ ಬಾಂಬ್ ಹಾಕ್ದೋರಲ್ಲ. ಹಿಂದುಗಳು ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಿದ ಪ್ರಕರಣ ಇಲ್ಲ ಎಂದು ಸಿಟಿ ರವಿ ತಿಳಿಸಿದರು. ಗಣೇಶೋತ್ಸವದ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ಎಂದು ಸಾಕಷ್ಟು ಸುದ್ದಿಯಾಗಿದೆ. ಹಿಂದುಗಳು ಯಾರ ಮೇಲೂ ಕಾಲು ಕೆರಕೊಂಡು ಜಗಳಕ್ಕೆ ಹೋಗಿಲ್ಲ ಎಂದರು.

- Advertisement - 

ನಾವು ಸಂಭ್ರಮ ಪಡುವುದನ್ನ ತಡೆಯೋದು ಅತಿರೇಕದ ವರ್ತನೆ. ನಾವು ಯಾರಿಗಾದ್ರು ತೊಂದರೆ ಮಾಡಿದ್ರೆ ನಮ್ಮನ್ನ ಪ್ರಶ್ನೆ ಮಾಡಿ. ನಾವು ಹೆಚ್ಚು ಅಂದ್ರೆ ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಅಂತೀವಿ. ಅದ್ಬಿಟ್ಟು ಕಾಪೀರರನ್ನ ಕೊಲ್ಲಿ ಎಂದು ಪ್ರಚೋದನೆ ಮಾಡುತ್ತೇವಾ ಎಂದು ಅವರು ಪ್ರಶ್ನಿಸಿದರು.

ಧರ್ಮಸ್ಥಳ ಕೇಸಲ್ಲಿ ಷಡ್ಯಂತ್ರ ಇರೋದು ಅಂಗೈ ಹುಣ್ಣಿನಷ್ಟು ಸ್ಪಷ್ಟ. 2023 ಜುಲೈನಲ್ಲಿ ಸರ್ಕಾರಕ್ಕೆ ಈ ಬಗ್ಗೆ ಇಂಟಲಿಜೆನ್ಸಿ ಮಾಹಿತಿ ಇತ್ತು. ಟಾರ್ಗೆಟ್ ಧರ್ಮಸ್ಥಳ, ವೀರೇಂದ್ರ ಹೆಗಡೆ ಯವರು ಅಂತ ರಿಪೋರ್ಟ್ ಇತ್ತು. ಒಡನಾಡಿ ಸಂಸ್ಥೆಯವರು 2023ರಲ್ಲೆ ಮಹೇಶ್ ಶೆಟ್ಟಿ ತಿಮ್ಮರೋಡಿ ಭೇಟಿ ಮಾಡಿದ್ರು. ಧ್ವನಿ ಎಂಬ ವಾಟ್ಸಪ್ ಗ್ರೂಫ್ ಮೂಲಕ ಕಂಟೆಂಟ್ ಕ್ರಿಯೇಟ್ ಮಾಡಿ ಅಪಪ್ರಚಾರದ ಸಂಚು ನಡೆದಿತ್ತು. ಇದೆಲ್ಲದರ ಮಾಹಿತಿ ಸರ್ಕಾರಕ್ಕೆ ಇದ್ದರೂ ಸರ್ಕಾರ ಯಾಕೆ ಮೌನವಹಿಸ್ತು ಎಂದು ರವಿ ಅವರು ಪ್ರಶ್ನಿಸಿದರು.

- Advertisement - 

ನೀವು ನಮ್ಮನ್ನ ಸೌಜನ್ಯ ಪರಾನಾ, ವೀರೇಂದ್ರ ಹೆಗ್ಗಡೆ ಪರಾನಾ ಅಂತ ಕೇಳಿದಿರಿ. ವೀರೇಂದ್ರ ಹೆಗಡೆ, ಸೌಜನ್ಯ ಪ್ರಕರಣ ಎದುರು ಬದರು ನಿಲ್ಲಿಸುವುದೇ ಒಂದು ಷಡ್ಯಂತ್ರ. FIRನಲ್ಲಿ ವೀರೇಂದ್ರ ಹೆಗ್ಗಡೆ ಹೆಸರಿಲ್ಲ, ಸಿಒಡಿನಲ್ಲಿ ಚಾರ್ಜ್ ಶೀಟ್ ಇಲ್ಲ‌. ನೀವ್ಯಾಕೆ ಸೌಜನ್ಯ ಪ್ರಕರಣದಲ್ಲಿ ಹೆಗಡೆಯವರನ್ನ ತಂದು ಷಡ್ಯಂತ್ರ ಮಾಡತ್ತಿದ್ದೀರಿ. ಇದು ನಿಮ್ಮ ಷಡ್ಯಂತ್ರ, ಇಂಟಲಿಜೆನ್ಸ್ ರಿಪೋರ್ಟ್ ನೀಡಿದ್ಮೇಲು ಕೂಡಾ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಯಾಕಿಲ್ಲ.

ಷಡ್ಯಂತ್ರ ಬಯಲಿಗೆ ಬರಬೇಕು, ವಿದೇಶಿ ಫಂಡಿಂಗ್ ಆಗಿದ್ರೂ ಬಯಲಿಗೆ ಬರಬೇಕು. ಸರ್ಕಾರ ಮೌನವಾಗಿರುವ ಮೂಲಕ ಪರೋಕ್ಷ ಕುಮ್ಮಕ್ಕು ಕೊಟ್ಟಿರಬಹುದು ಎನಿಸುತ್ತದೆ ಎಂದು ರವಿ ಅವರು ಆರೋಪಿಸಿದರು.

ಮೌನವಾಗಿರವ ರೀತಿನಲ್ಲಿ ಒತ್ತಡ ಕ್ರಿಯೇಟ್ ಆಗಿರಬಹುದು. ಬುರುಡೆ ಚಿನ್ನಯ್ಯ ದೆಹಲಿಗೂ ಹೋಗಿದ್ದ, ಮಹೇಶ್ ಶೆಟ್ಟಿ ಇವ್ರೆಲ್ಲ ಹೋಗಿದ್ರು ಅಂತ ಮಾಹಿತಿಯಿದೆ. ಚೆನ್ನೈನಲ್ಲಿ ಮೀಟಿಂಗ್ ಮಾಡಿದ ಮಾಹಿತಿ, ಕಾಂಗ್ರೆಸ್ ನ ಒಬ್ಬ ನೆರೆಯ ರಾಜ್ಯದ ಸಂಸದ ಭಾಗಿಯಾದ್ದಾನೆಂದು ಸುದ್ದಿ ಇದೆ ಎಂದು ಅವರು ಆರೋಪಿಸಿದರು.

ಎಡಪಂಥಿಯರ ಒತ್ತಾಯದ ಮೇಲೆ ತನಿಖೆಗೆ ಕೊಟ್ಟಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇವೆಲ್ಲ ನೋಡಿದ್ರೆ ಸಿಎಂ ರನ್ನೂ ಕಾಣದ ಕೈಗಳ ಒತ್ತಡ ಧರ್ಮಸ್ಥಳ ವಿರುದ್ದ ಕಾರ್ಯಚರಣೆ ಮಾಡಲು ಮೌನ ಸಮ್ಮತಿ ನೀಡುವಂತೆ ಮಾಡಿರಬಹುದು ಎನಿಸುತ್ತದೆ. ಮಹೇಶ್ ಶೆಟ್ಟಿ ತಿಮರೋಡಿ ಮಾತು ಕೇಳಿ ಧರ್ಮಸ್ಥಳದ ಬಗ್ಗೆ ಅನುಮಾನ ಪಟ್ರಾ ಡಿಕೆ ಶಿವಕುಮಾರ್ ಅವರೇ.

ಧರ್ಮಸ್ಥಳ, ಧರ್ಮಾಧಿಕಾರಿ ಮೇಲೆ ಕೋಟ್ಯಾಂತರ ಜನರ ಭಕ್ತಿ ಧ್ವಂಸ ಮಾಡಲು ಯಾರು ಯಾರಿಗೆ ಅಧಿಕಾರ ಕೊಟ್ರು. ನಿವ್ಯಾಕೆ ಅದನ್ನ ತಡಿಲಿಲ್ಲ, ಮೊಹಮದ್ ಸಮೀರ್ ಮೇಲೆ ಏಕೆ ಕ್ರಮ ತಗಂಡಿಲ್ಲ. ಅನ್ಯ ಧರ್ಮಿಯರ ಬಗ್ಗೆ ಹೀಗೆ ಮಾಡಿದ್ರೆ ನಿಮ್ಮ ಸರ್ಕಾರ ತಕಧಿಮಿ, ದಿಮಿತಕ ಅಂತ ಕುಣಿತಿರ್ಲಿಲ್ಲವಾ ನಿಮ್ಮ ಮೈಮೇಲೆ ಭೂತಗಳು ಬರ್ತಾ ಇರಲಿಲ್ಲವಾ? ಎಂದು ಸಿಟಿ ರವಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.

ಈಗ ಭೂತ ಬೇಡ, ದೇವರೂ ಬರಲಿಲಿಲ್ವಾ, ಯಾಕ್ ಬರ್ಲಿಲ್ಲ. ಅಪಪ್ರಚಾರ ಮಾಡಿದವ್ರನ್ನ ಒದ್ದು ಒಳಗಾಕೋದು ಬೇಡ ಅಂತ ಬಿಜೆಪಿ ಯವರು ಹೇಳಿದ್ರಾ. ನೀವ್ಯಾಕೆ ಡಬಲ್ ಆಕ್ಟಿಂಗ್ ಮಾಡ್ತಿದ್ದೀರಿ. ನೀವು ಸರ್ಕಾರ, ಒಂದು ಪಾರ್ಟಿಯಲ್ಲ, ಬರೀ ಪಾರ್ಟಿ ಆಗಿದ್ರೆ ಪ್ರಶ್ನೆ ಮಾಡ್ತಿರ್ಲಿಲ್ಲ. ಸಮೀರ್ ಆಂಟಿಸಿಪೆಟ್ರಿ ಬೇಲ್ ತಗಳ್ತನೆ, ಮಹೇಶ್ ಶೆಟ್ಟಿಗೆ ಒಂದು ದಿನದಲ್ಲಿ ಬೇಲ್ ಸಿಗತ್ತೆ. ನೀವು ಇಬ್ಬರಿಗೂ ಬೇಲ್ ಕೊಡಬೇಡಿ, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರತ್ತೆ. ನಮ್ಮನ್ನ ವಾರಗಟ್ಟಲೆ ಜೈಲಲ್ಲಿ ಇಟ್ಟಿದ್ದಾರೆ, ನಾವೇನೂ ಮಾಡ್ತಿರ್ಲಿಲ್ಲ ಜೈಶ್ರೀರಾಮ್, ಭಾರತ್ ಮಾತಾಕಿ ಜೈ ಅಂತಿದ್ವಿ. ನಿಮಗೆ ಹಿಂದೂ ದೇವರು, ಧರ್ಮಾಧಿಕಾರಿ ಅಂದ್ರೆ ಸದರನಾ? ಎಂದು ಅವರು ಪ್ರಶ್ನಿಸಿದರು.

ಅನ್ಯ ಮತಿಯರ ವಿಷಯದಲ್ಲಿ ಹಿಂದುಗಳು ಏನಾದ್ರು ಮಾಡಿದ್ರೆ ಸೊಮೊಟೊ ಆಕ್ಷನ್ ತಗಳ್ತಿದ್ರಿ. ಎಲ್ಲಿ ಸೊಮೊಟು ಆಕ್ಷನ್, ಸುಳ್ಳು ಪತ್ತೆ ಹಚ್ಚುವ ಸಚಿವ ಸಂಪುಟದ ಸಚಿವರು ಎಲ್ಲೋದ್ರು. ಧರ್ಮಸ್ಥಳ ವಿಷಯದಲ್ಲಿ ಯಾಕೆ ಯಾರು ಬಾಯೇ ಬಿಟ್ಟಿಲ್ಲ. ಸುಳ್ಳು ಪತ್ತೆ ಹಚ್ಚುವ ಪ್ರಖ್ಯಾತ, ಕುಖ್ಯಾತರೆಲ್ಲ ಯಾಕೆ ಮೌನ ವಹಿಸುದ್ದಾರೆ ಧರ್ಮಸ್ಥಳ ಕೇಸಲ್ಲಿ ಕಾಣದ ಕೈಗಳು ಕೈಯಾಡಿಸುತ್ತಿದ್ದಾವೆ. ಬಿಜೆಪಿಯವರಿಗೂ ಫಂಡಿಂಗ್ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ. ಮುಖ್ಯಮಂತ್ರಿಗಳೇ, ರಾಜ್ಯದ ಸಿಎಂ ಇದ್ದೀರಿ ಬೇಜವಾಬ್ದಾರಿ ಹೇಳಿಕೆ ಕೊಡೋದಲ್ಲ. ನಮ್ಮ ಕಾರ್ಯಕರ್ತರಿಗೆ ಅಂತ ದುರ್ದೈವ ಬಂದಿಲ್ಲ. ನಾವು ಧರ್ಮದ ಪರ ನಿಂತಿದ್ದೇವೆ. ಹೇಳಿ ಫಂಡ್ ಯಾರ್ ಕೊಟ್ಟಿದ್ದಾರೆ ತನಿಖೆ ಮಾಡೋಕೆ ಹೇಳಿ. ವಯಸ್ಸಾಗ್ತಾ ಸಿಎಂ ಮಾತಿನ‌ದಾಟಿ ಹಿಡಿತ ಕಳೆದುಕೊಳ್ತಿದ್ದಾರೆ ಅನ್ಸತ್ತೆ. ಸಿಎಂ ಸಿದ್ದರಾಮಯ್ಯ ಗೆ ವಯೋ ದೌರ್ಬಲ್ಯ ಅಂದುಕೊಳ್ಳೋದೋ? ಪರಿಸ್ಥಿತಿ ನಿಭಾಯಿಸಲಾಗದೆ ಯಾರ್ಯಾರ್ದೋ ತಲೆಗೆ ಕಟ್ಟಯವ ಸಂಚೋ ಗೊತ್ತಾಗ್ತಿಲ್ಲ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

 

 

 

Share This Article
error: Content is protected !!
";