ಟಿಬಿ ಮುಕ್ತ ತೀವ್ರ ಪ್ರಚಾರಾಂದೋಲನ ಯಶಸ್ವಿಗೆ ಕೈಜೋಡಿಸಿ- ಡಾ.ಸುಧಾ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
100
ದಿನ ಟಿಬಿ ಮುಕ್ತ ತೀವ್ರ ಪ್ರಚಾರಾಂದೋಲನ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ..ಸುಧಾ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆ, ಜಾನ್ಮೈನ್ಸ್ ಅವರ ಸಹಯೋಗದಲ್ಲಿ 100 ದಿನ ಟಿಬಿ ಮುಕ್ತ ತೀವ್ರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
100
ದಿನಗಳ ಟಿಬಿ ಮುಕ್ತ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮವು ಇಂದಿಗೆ 87 ದಿನಗಳ ಯಶಸ್ವಿ ಪ್ರಯಾಣ ಬೆಳೆಸಿದೆ. ನಿಮ್ಮೆಲ್ಲರ ಸಹಕಾರ ಸಹಯೋಗದೊಂದಿಗೆ 12 ಹೊಸ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಪ್ರಧಾನಮಂತ್ರಿಗಳ ನಿಕ್ಷಯ ಮಿತ್ರ ಕಾರ್ಯಕ್ರಮ ಯೋಜನೆಯಲ್ಲಿ ಜಾನ್ ಮೈನ್ಸ್ ಕಂಪನಿಯವರು ಭಾಗಿದಾರರಾಗಿ ಸಮುದಾಯ ಆರೋಗ್ಯ ಕೇಂದ್ರ ಸಿರಿಗೆರೆ ಸುತ್ತಮುತ್ತ ಹೊಂದಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಯಾಸಪುರ, ವಿಜಾಪುರ, ಹಿರೇಗುಂಟನೂರು, ಭೀಮಸಮುದ್ರ ವ್ಯಾಪ್ತಿಯ ಒಟ್ಟು 35 ಟಿಬಿ ಪ್ರಕರಣಗಳಿಗೆ ಪೌಷ್ಟಿಕ ಪೋಷಕ ಆಹಾರದ ಕಿಟ್ಗಳನ್ನು ಆರು ತಿಂಗಳ ಕಾಲ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಶೀಘ್ರವಾಗಿ ಕ್ಷಯ ರೋಗ ಪ್ರಕರಣ ಪತ್ತೆ ಹಚ್ಚುವುದು, ಚಿಕಿತ್ಸೆ ದೊರಕಿಸುವುದು ಗುಣಮುಕ್ತರನ್ನಾಗಿ ಮಾಡುವುದು, ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು, ಮರಣ ಪ್ರಮಾಣದರ ಕಡಿಮೆ ಮಾಡುವುದು, ಕ್ಷಯರೋಗದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರದು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಕ್ಷಯರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ತಡೆಯಬೇಕು. ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಕ್ಷಯ ರೋಗಿಗಳನ್ನ ಆರೈಕೆ ಮಾಡುವಾಗ ಸಹಕರಿಸಬೇಕು. ಯಾವುದೇ ರೀತಿಯ ಭೇದಗಳನ್ನು ಮಾಡಬಾರದು. ನಿಮ್ಮೊಡನೆ ನಾವಷ್ಟೇ ಅಲ್ಲ ಸಂಪೂರ್ಣ ಸಮುದಾಯದ ಬೆಂಬಲವಿರುತ್ತದೆ. ಯಾವುದೇ ಕಾರಣಕ್ಕೂ ಮಾತ್ರೆಯನ್ನು ತಪ್ಪಿಸದೆ ನುಂಗಿ ಟಿಬಿ ಚಾಂಪಿಯನ್ನಾಗಿ ಇತರರಿಗೆ ಮಾರ್ಗದರ್ಶಿಗಳಾಗಿ ಎಂದರು.

 ಕಂಪನಿಯ ಸಿಎಸ್ಆರ್ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಸಮುದಾಯದ ಸೇವೆಗೆ ಆರೋಗ್ಯ ಇಲಾಖೆಯೊಂದಿಗೆ ಸದಾ ಕಾಲ ಕೈ ಜೋಡಿಸುತ್ತೇವೆ ಎಂದರು ಕಾರ್ಯಕ್ರಮದಲ್ಲಿ ಜಾನ್ ಮೈನ್ಸ್ ಡಿಜಿಎಂ ರಣದೇವ್, ಡೆಪ್ಯೂಟಿ ಮ್ಯಾನೇಜರ್ ಸುಭಾಷ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಬಿ.ಮೂಗಪ್ಪ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಕುಮಾರ್, ನವೀನ್, ವೀರೇಶ್, ಇಸ್ಮಾಯಿಲ್, ನಾಗರಾಜ್, ಸುನಿಲ್,  ದಂತ ವೈದ್ಯೆ ಡಾ.ಬಿಂದ್ಯಾ, ಆಶಾ ಕಾರ್ಯಕರ್ತೆಯರು, 35 ಟಿಬಿ ರೋಗದ ಪ್ರಕರಣದ ಫಲಾನುಭವಿಗಳು ಭಾಗವಹಿಸಿದ್ದರು. ಎಲ್ಲರಿಗೂ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.

 

 

Share This Article
error: Content is protected !!
";