ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಗೆ ಇಡಿ ಮತ್ತೆ ಶಾಕ್‌

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆನ್‌ಲೈನ್ ಬೆಟ್ಟಿಂಗ್ ಹಾಗೂ ಮನಿ ಗೇಮಿಂಗ್ ಹಗರಣದಲ್ಲಿ ಬಂಧನದಲ್ಲಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಗೆ ಇಡಿ ಮತ್ತೆ ಶಾಕ್‌ನೀಡಿದೆ.

ಶಾಸಕರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) 3ನೇ ಸಲ ದಾಳಿ ಮಾಡಿದ್ದು, ಲಾಕರ್ ನಲ್ಲಿದ್ದವು ಎನ್ನಲಾದ ಅಮೂಲ್ಯ ವಸ್ತುಗಳಿದ್ದ 2 ಬಟ್ಟೆ ಚೀಲಗಳನ್ನು ತೆಗೆದು ಕೊಂಡು ಹೋಗಿದೆ ಎಂದು ತಿಳಿದುಬಂದಿದೆ.

- Advertisement - 

ಮೂಟೆಯಲ್ಲಿ ಚಿನ್ನ ಇತ್ತೋ ಅಥವಾ ದಾಖಲೆಗಳಿದ್ದವೋ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಆದಾಗ್ಯೂ ಲಾಕರ್‌ಗಳಲ್ಲಿ ಚಿನ್ನ ಸಿಕ್ಕಿರುವುದನ್ನು ಬಲ್ಲ ಮೂಲಗಳು ಖಚಿತಪಡಿಸಿದ್ದು ಇಡಿ ಅಧಿಕೃತ ಮಾಹಿತಿ ತಿಳಿಸಬೇಕಿದೆ.

 

- Advertisement - 

 

Share This Article
error: Content is protected !!
";