ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಆರೋಗ್ಯ ಇಲಾಖೆಯನ್ನು ನಿರ್ವಹಿಸುತ್ತಿರುವ ದಿನೇಶ್ ಗುಂಡೂರಾವ್ ಅವರು ತಮ್ಮ ಇಲಾಖೆಯನ್ನೂ ಅಯೋಮಯ ಮಾಡಿದ್ದಾರೆ, ತಮ್ಮ ಕ್ಷೇತ್ರವನ್ನೂ ಗಬ್ಬೆಬ್ಬಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಆರೋಗ್ಯ ಸಚಿವರ ಕ್ಷೇತ್ರದಲ್ಲಿ ನೈರ್ಮಲ್ಯ, ಶುಚಿತ್ವ ಎನ್ನುವ ಪದಗಳಿಗೆ ಜಾಗವೇ ಇಲ್ಲದಂತಾಗಿದೆ. ತಮ್ಮ ಕ್ಷೇತ್ರವನ್ನೇ ರೋಗರುಜಿನಗಳ ತಾಣವಾಗಿಸಿದವರು ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ಎಷ್ಟು ಗಮನವಹಿಸುವರು? ಎಂದು ಬಿಜೆಪಿ ಪ್ರಶ್ನಿಸಿದೆ.
ಜನಸಾಮಾನ್ಯರು ನಡೆದಾಡುವ ಸಾರ್ವಜನಿಕ ಸ್ಥಳಗಳನ್ನು ಕಾಂಗ್ರೆಸ್‌ಸರ್ಕಾರ ಕಸದ ಕೊಂಪೆಯಾಗಿಸುತ್ತಿದೆ. ಬ್ರ್ಯಾಂಡ್‌ಬೆಂಗಳೂರು ಎನ್ನುವುದು ಜಾಹೀರಾತಿಗೆ ಮಾತ್ರ ಸೀಮಿತವಾಗಿದೆ, ಬೆಂಗಳೂರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ರೌರವ ನರಕ ಮಾಡಲು ಹೊರಟಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.