ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಗುವಿನ ಜೀವನದ ಪ್ರತಿ ಹಂತದಲ್ಲೂ ಶಕ್ತಿಯಾಗಿ ನಿಲ್ಲುವ ತಂದೆಯನ್ನು ಗೌರವಿಸಿ, ಸಂಭ್ರಮಿಸುವ ನಿಟ್ಟಿನಲ್ಲಿ ಫಾದರ್ಸ್ ಡೇ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಕಿಡ್ಜೀ ( KIDZEE )ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ. ಸಂದೀಪ್ ತಿಳಿಸಿದರು.
ನಗರದ ಖಾಸಗಿ ಭವನದಲ್ಲಿ ಸೌಭಾಗ್ಯ ಟ್ರಸ್ಟ್ ಸಹಯೋಗದೊಂದಿಗೆ ಕಿಡ್ಜೀ ( KIDZEE ) ಆಡಳಿತ ಮಂಡಳಿ ಆಯೋಜಿಸಿದ್ದ “ಫಾದರ್ಸ್ ಡೇ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಮಗುವಿಗೂ ತನ್ನ ತಂದೆಯ ಹೀರೋ ಆಗಿರುತ್ತಾರೆ , ಸಾವಿರಾರು ಕಷ್ಟಗಳನ್ನು ಎದುರಿಸಿದರು ತನ್ನ ಕಷ್ಟಗಳನ್ನು ತೋರ್ಪಡಿಸಿಕೊಳ್ಳದೆ ಮಗುವಿಗೆ ಸುಖ ಸಂತೋಷವನಷ್ಟೇ ನೀಡುವ ವಿಶ್ವದ ಎಲ್ಲ ತಂದೆಯರಿಗೆ ಈ ವೇದಿಕೆ ಅರ್ಪಣೆ ಮಾಡಿದ್ದೇವೆ, ತನ್ನ ಹೆಗಲ ಮೇಲೆ ಹೊತ್ತು ಪ್ರಪಂಚದ ಪರಿಚಯ ಮಾಡಿಸುವ ಎಲ್ಲಾ ತಂದೆಯರಿಗೂ ವಿಶ್ವ ತಂದೆಯರ ದಿನದ ಶುಭಾಶಯಗಳನ್ನು ಕೋರುತೇನೆ ಅಲ್ಲದೇ ಇಂದಿನ ಈ ವೇದಿಕೆ ವಿಶೇಷವಾಗಿದ್ದು ಅಂತಹ ಎಲ್ಲ ತಂದೆಯರನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಕಿಡ್ಜೀ ( KIDZEE ) ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ವಿಶೇಷ ಕುತೂಹಲಕಾರಿ ಆಟಗಳನ್ನು ಆಯೋಜನೆ ಮಾಡಿದ್ದು ಒಟ್ಟಾರೆ ಪೋಷಕರೊಂದಿಗೆ ಸಂಭ್ರಮಿಸಲಿದ್ದೇವೆ ಎಂದರು.
ಫಾದರ್ಸ್ ಡೇ ಸ್ಪೆಷಲ್ ಫ್ರೇಮ್ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪೋಷಕರು ಫಾದರ್ಸ್ ಡೇ ಸ್ಪೆಷಲ್ ಫೋಟೋ ಫ್ರೇಮ್ ಎಲ್ಲರ ಗಮನ ಸೆಳೆಯಿತು ಕಾರ್ಯಕ್ರಮಕ್ಕೆ ಬಂದ ಪುಟಾಣಿಗಳು ತಮ್ಮ ಪೋಷಕ ರೊಟ್ಟಿಗೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ತುಂಬಾ ಉತ್ಸಾಹಕರಾಗಿದ್ದು ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರು ಸೌಭಾಗ್ಯ ಟ್ರಸ್ಟ್ ನ ಮುಖ್ಯಸ್ಥ ಎಚ್ ರಾಜಗೋಪಾಲ್ ಮಾತನಾಡಿ ತಂದೆಯರಿಗಾಗಿ ಮೀಸಲಿರುವ ವಿಶೇಷ ದಿನವನ್ನು ಕಿಡ್ಜೀ ( KIDZEE ) ತಂಡವು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ,ಕಿಡ್ಜೀ ( KIDZEE ) ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು .
ಅಲ್ಲದೇ ಸೌಭಾಗ್ಯ ಟ್ರಸ್ಟ್ ವತಿಯಿಂದ ತುರ್ತು ಸಂದರ್ಭಗಳಿಗಾಗಿ ರಕ್ತ ನಿಧಿ ಕೇಂದ್ರ , ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಪ್ತ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು , ಸಾರ್ವಜನಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೌಭಾಗ್ಯ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕಿಡ್ಜೀ ( KIDZEE )ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.