ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇಲ್ಲಿನ ಅವಧಾನಿ ನಗರ ನಿವಾಸಿ ಪ್ರಥಮ ದರ್ಜೆವಿದ್ಯುತ್ ಗುತ್ತಿಗೆದಾರ ಗಿರಿಸ್ವಾಮಿ(59) ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ನಿಧನ ಹೊಂದಿರುತ್ತಾರೆ. ಮೃತರು ಪತ್ನಿ ಒಬ್ಬ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂದು ವರ್ಗವನ್ನು ಅಗಲಿರುತ್ತಾರೆ.
ಇವರು ಕಳೆದ 40 ವರ್ಷಗಳಿಂದ ಆರ್ ಎಸ್ಎಸ್ ಸ್ವಯಂ ಸೇವಕರಾಗಿದ್ದು ಜಿಲ್ಲಾ ಗತಿ ವಿಧಿಯಲ್ಲಿ ಸೇವಾ ಪ್ರಮುಖರಾಗಿದ್ದರು ಹಾಗೂ ಕುಂಚಿಟಿಗ ಕ್ಷೇಮಾಭಿವೃದ್ದಿ ಸಂಘದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿರುತ್ತಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಸಂಜೆ ಹೊಸ ಯಳನಾಡು ಬಳಿ ಇರುವ ಅವರ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.