ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಕ್ಷದ ಸಭೆಯನ್ನು ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎಚ್ ಎಂ ರಮೇಶ್ ಗೌಡ ಉದ್ಘಾಟಿಸಿದರು.
ಈ ಸಭೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಮುಖಂಡರಾದ ಬಿ ಅಂದಾನಪ್ಪ, ಕ್ಷೇತ್ರ ಅಧ್ಯಕ್ಷ ಎಮ್ ಮುನಿಸ್ವಾಮಿ, ಯಲಹಂಕ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎಂ ಮುನೇಗೌಡ, ಬೆಂಗಳೂರು ನಗರ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್,
ಶಿವಣ್ಣ, ಜಯಣ್ಣ, ಭರತ್, ಲೋಕೇಶ್ ಗುಂಡಪ್ಪ, ದಾಸರಹಳ್ಳಿ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಲಕ್ಷ್ಮೀದೇವಿ (ಛಾಯಾ), ಮಾಜಿ ಅಧ್ಯಕ್ಷೆ ರಾಣಿ ಪ್ರತಾಪ್ ಸೇರಿದಂತೆ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.