ವಿಶೇಷ ಡಿ.ಎಡ್ ಕೋರ್ಸ್‍ಗಳಿಗೆ ಉಚಿತ ತರಬೇತಿ: ಪ್ರವೇಶಾತಿ ಪ್ರಾರಂಭ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆಯುತ್ತಿರುವ ಅಂಧ ಹಾಗೂ ಶ್ರವಣದೋಷ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪ್ರವೇಶಾತಿ ಪ್ರಾರಂಭವಾಗಿದೆ. ಜುಲೈ 12 ಅರ್ಜಿ ಸಲ್ಲಿಸಲು ಕೊನೆಯ ದಿನ.

ರಾಷ್ಟ್ರೀಯ ಪುನರ್ವಸತಿ ಮಂಡಳಿ (ಆರ್‍ಸಿಐ) ಪಠ್ಯಕ್ರಮ ಹಾಗೂ ಮಾರ್ಗಸೂಚಿಯನ್ವಯ ಡಿಪ್ಲೊಮೊ ಇನ್ ಸ್ಪೆಷನ್ ಎಜುಕೇಷನ್ (ದೃಷ್ಠಿದೋಷ), ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಷನ್ (ಶ್ರವಣದೋಷ) ವಿಶೇಷ ಡಿ.ಎಡ್ ಕೋರ್ಸ್‍ಗಳನ್ನು   ನಡೆಸಲಾಗುತ್ತಿದೆ.

- Advertisement - 

ಈ ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ದೃಷ್ಠಿದೋಷ ಹಾಗೂ ಶ್ರವಣದೋಷ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಷನ್ (ದೃಷ್ಠಿದೋಷ), ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಷನ್ (ಶ್ರವಣದೋಷ) ವಿಶೇಷ ಡಿ.ಎಡ್ ಕೋರ್ಸ್‍ಗಳಿಗೆ ಉಚಿತ ತರಬೇತಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ. ಉಚಿತವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ಪಿಯುಸಿ ಉತ್ತೀರ್ಣರಾದವರು ಹಾಗೂ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.  ಹೆಚ್ಚಿನ ಮಾಹಿತಿಗಾಗಿ ಅಂಧ ಹಾಗೂ ಶ್ರವಣದೋಷ ಮಕ್ಕಳ ತರಬೇತಿ ಕೇಂದ್ರ, ತಿಲಕ್  ನಗರ, ಮೈಸೂರು, ದೂರವಾಣಿ ಸಂಖ್ಯೆ 0821-2491600 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";