ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಗಂಗಮ್ಮ ಎಸ್. ಅಂತಿಮ ಪದವಿ ಪರೀಕ್ಷೆಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.
ಎನ್‌ಇಪಿ ಪಠ್ಯದಲ್ಲಿ ಪ್ರಥಮ ರ್‍ಯಾಂಕ್ ಪಡೆದಿರುವ ಮೊದಲ ವಿದ್ಯಾರ್ಥಿನಿ ಗಂಗಮ್ಮ ಸಾಧನೆಗೆ ಕಾಲೇಜು ಸಿಡಿಸಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಪ್ರಾಚಾರ್ಯ ಡಾ.ಶಿವಮೂರ್ತಿನಾಯಕ್, ಹಿರಿಯ ಪ್ರಾಧ್ಯಾಪಕರುಗಳಾದ ಡಾ.ಕೊಟ್ರಪ್ಪ, ಡಾ.ಪ್ರವೀಣ್‌ಕುಮಾರ್, ಮಂಜುನಾಥ್, ಡಾ.ರವಿಕಿರಣ್, ಡಾ.ದಿನೇಶ್, ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.