ಜಿಟಿಟಿಸಿ ತರಬೇತಿ ಕೇಂದ್ರ ಯಶಸ್ವಿಹೆಜ್ಜೆಯತ್ತ ಮುನ್ನಡೆ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ಬಳ್ಳಾರಿ ರಸ್ತೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ನಿರ್ಮಾಣವಾದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ತನ್ನ ಐದನೇ ವರ್ಷದ ತರಗತಿ ಪ್ರಾರಂಭೋತ್ಸವವನ್ನು ಶನಿವಾರ ಹಮ್ಮಿಕೊಂಡಿದ್ದು ಕ್ಷೇತ್ರದ ಶಾಸಕ
, ರಾಜ್ಯಸಣ್ಣಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಜ್ಯೋತಿಬೆಳಗುವ ಮೂಲಕ, ಬೆಳಕು-೨೦೨೫ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

- Advertisement - 

ಬಯಲುಸೀಮೆಯ ಈ ಬೆಂಗಾಡಿನಲ್ಲಿ ಕಳೆದ ಐದು ವರ್ಷಗಳಿಂದ ಜಿಟಿಟಿಸಿ ಆರಂಭೋತ್ಸವ ನಡೆಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ವಿದ್ಯೆಯನ್ನು ನೀಡುವುದಲ್ಲದೆ, ಭವಿಷ್ಯದ ಬದುಕನ್ನು ಕಾಣಲು ಉತ್ತಮ ತರಬೇತಿಯನ್ನು ಸಹ ನೀಡುವ ಈ ಕೇಂದ್ರ ಇಂದು ರಾಜ್ಯಮಟ್ಟದ ಹೆಮ್ಮೆಯ ಕೇಂದ್ರವಾಗಿ ಪರಿವರ್ತನೆಯಾಗಿದೆ. 

- Advertisement - 

ಪ್ರಾಂಶುಪಾಲ ಜಿ.ಆರ್.ತಿಪ್ಪೇಸ್ವಾಮಿ, ಬೋಧಕ ವರ್ಗ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಜಿಟಿಟಿಸಿಯ ಕೇಂದ್ರದ ಹೆಮ್ಮೆಯನ್ನು ಹೆಚ್ಚಿಸಿದ್ಧಾರೆ. ಪ್ರತಿವರ್ಷವೂ ಉತ್ತಮ ಫಲಿತಾಂಶ  ದಾಖಲಿಸುವ ಜಿಟಿಟಿಸಿ ರಾಷ್ಟ್ರಮಟ್ಟದಲ್ಲೂ ಖ್ಯಾತಿಯಾಗಲಿ ಎಂದು ಶುಭಹಾರೈಸುವುದಾಗಿ ಎಂದು ತಿಳಿಸಿದರು.

ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಹಾಗೂ ಬೆಂಗಳೂರು ವಿಭಾಗದ ಮುಖ್ಯಸ್ಥ ಜಿ.ಆರ್. ತಿಪ್ಪೇಸ್ವಾಮಿ, ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಜಿಟಿಟಿಸಿ ಕೇಂದ್ರಗಳಲ್ಲಿ ಚಳ್ಳಕೆರೆ ಜಿಟಿಟಿಸಿ ಕೇಂದ್ರ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ರಾಜ್ಯದ ಬೃಹತ್ ಕಂಪನಿಗಳಲ್ಲಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

- Advertisement - 

ವಿಶೇಷವೆಂದರೆ ಬೆಂಗಳೂರು ಸೇರಿದಂತೆ ಬೇರೆ, ಬೇರೆ ರಾಜ್ಯದಿಂದ ಕಂಪನಿಯವರು ತರಬೇತಿ ಪಡೆದ ವಿದ್ಯಾರ್ಥಿಗಳನ್ನು ತಮ್ಮ ಕಂಪನಿಗಳಿಗೆ ಕೆಸಕ್ಕೆ ಸೇರ್ಪಡೆಮಾಡಿಕೊಳ್ಳಲು ಮುಂದೆಬರುತ್ತಿದ್ಧಾರೆ. ನೂರಾರು ವಿದ್ಯಾರ್ಥಿಗಳು ಈಗಾಗಲೇ ತಮ್ಮ ಉದ್ಯೋಗದ ಕನಸನ್ನು ನನಸು ಮಾಡಿಕೊಂಡಿದ್ಧಾರೆ. ಈ ಪರಂಪರೆ ಹೀಗೆ ಮುಂದುವರೆಯಲಿದೆ, ವಿಶೇಷವಾಗಿ ಕ್ಷೇತ್ರದ ಶಾಸಕರು, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ರಘುಮೂರ್ತಿಯವರ ಸಹಕಾರ ಇದಕ್ಕೆ ಪ್ರೇರಣೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಪ್ರಭಾರೆ ಅಧ್ಯಕ್ಷೆ ಕವಿತಾಬೋರಯ್ಯ, ಸದಸ್ಯರಾದ ಶಿಲ್ಪಮರುಳಿ, ಆರ್.ಮಂಜುಳಾಪ್ರಸನ್ನಕುಮಾರ್, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ನಾಮಿನಿ ಸದಸ್ಯ ಅನ್ವರ್‌ಮಾಸ್ಟರ್, ಕೇಂದ್ರದ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಐದನೇ ಬ್ಯಾಚ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
error: Content is protected !!
";