ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ವಾಣಿ ವಿಲಾಸ ಪುರದ ಶ್ರೀ ಬಿ ಎಲ್ ಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ಓದಿದ್ದ 1996ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ದೀಪದಿಂದ ದೀಪ ಹಚ್ಚಿ ಕತ್ತಲೆಯ ತಮವನ್ನು ಹಣತೆಯಿಂದ ಹೊಡೆದೋಡಿಸಿ ಅಜ್ಞಾನದ ಅಂಧಕಾರವನ್ನು ಸುಜ್ಞಾನವೆಂಬ ಜ್ಯೋತಿ ಬೆಳಗಿಸುವ ಮೂಲಕ ಗುರುವಂದನ ಕಾರ್ಯಕ್ರಮವನ್ನು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ.ಅನಂತರೆಡ್ಡಿ ಮತ್ತಿತರರು ಉದ್ಘಾಟಿಸಿದರು.
ಸಮಾರಂಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕರುಗಳಾದ ಬಿ.ಟಿ. ತಿಪ್ಪೇಸ್ವಾಮಿ, ಎಸ್.ಜಿ.ಪುಟ್ಟರಂಗಪ್ಪ, ಬಿ.ಎಸ್ .ಚಂದ್ರ ಹಾಸರೆಡ್ಡಿ, ಎ .ಎನ್. ಚಂದ್ರಪ್ಪ, ಜಿ. ಬಿ .ಪಂಚಾಕ್ಷರಪ್ಪ, ಮಂಜುನಾಥ ಸ್ವಾಮಿ .ಜಿ, ಮಂಜುನಾಥಪ್ಪ. ಜಿ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಆಡಳಿತ ಮಂಡಳಿಯ ಕೆಲವು ಸದಸ್ಯರು 1996 ನೇ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಶಾಲೆಯ 1996ನೇ ಬ್ಯಾಚ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗುರು ವಂದನೆ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.