ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅವಳ ಸ್ವಾಗತ
——————–
ಚೆಲುವ ತೇರುಗಳ ತವರೂರಲಿ
ಏನೆಲ್ಲಾ ಪ್ರಕಟಿಸಿಕೊಂಡಿದ್ದೆ
ಸಂಗ ಸುಖದ ಇತಿಮಿತಿಯ
ಚಿತ್ತಾರದ ಸೊಬಗೊಳಗೆ
ಹೆತ್ತವರ ಭಾರ ಹಗುರಾದಂದೆ
ಬಹು ಪಯಣದ ಪೌರ್ಣಮಿ
ನೊಗಕೆ ಕೊರಳಿಡದ
ನಗ ನಾಣ್ಯ ಸುಂದರ
ಮುದವಿಲ್ಲದ ಕತ್ತಲು
ಕಸಿವಿಸಿ ಕಟ್ಟುಪಾಡಲಿ
ಬಂಧಿಸಿದವೋ ಸೆರೆಯಾದೆನೋ ವಿಪರ್ಯಾಸ
ಬದುಕು ಇಷ್ಟೇ ಎಂದಿದ್ದರೆ
ದಿನಗಳ ದೂಡಿ ಬಿಡುತ್ತಿದ್ದೆ
ಬಿಡಲೊಲ್ಲದ ಬಯಕೆಗಳು
ಮಕರಂದವುಣಿಸಿ
ಉಯಿಲೇಬ್ಬಿಸಿವೆ
ನಾ ಸಹ ಧ್ಯಾನ ಮಿಲನವೇ
ಮಲಿನವಾಗಲು ಬಿಟ್ಟವರಾರು
ಸತುವಿಲ್ಲದ ನೆಲವೆಂದವರಿಗೆ
ಬಂಜೆ ಹೇಗಾಗಲಿ
ಘಮಕೆ ಬಂದ ಕಣ್ಸೆರೆಯ ದುಂಬಿ
ಅರಳಿ ಸ್ವಾಗತಿಸಿದ್ದು ಸ್ಪಷ್ಟ ನೆನಪು
ನನ್ನಳತೆಯ ತಪ್ಪುಗಳು
ನಿಮ್ಮಳತೆಯ ಕುಡಿಗಳು
ಮಡಿಯುಟ್ಟ ಗರತಿಯ ಕಿತ್ತೆಸೆದೆ
ಆ ದುಂಬಿಯ ಸೇರಿ
ಸರಳುಗಳ ಸರಿಸಿ
ಅನಂತದಲಿ ಹಾರಾಡಿದೆ
ಫಲವಿಟ್ಟ ತುಂಬು ಚಂದಿರ
ಕರಿಮಣಿ ಕೊರಳು
ನಗ ನಾಣ್ಯ ಸುಂದರನದೇ
ಮಹಾಭಾರತದ
ಸಮ್ಮತಿಯ ಸಂತಾನ
ಕವಿತೆ:ಕುಮಾರ್ ಬಡಪ್ಪ